ಶನಿವಾರ, ಮೇ 8, 2021
17 °C

ಉಡುಪಿ | ಕೆಎಂಸಿಯಲ್ಲಿ ವಿಡಿಯೋ ಸಮಾಲೋಚನೆ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯು ರೋಗಿಗಳ ಅನುಕೂಲಕ್ಕಾಗಿ ವಿಡಿಯೋ ಸಮಾಲೋಚನೆ ಸೇವಾ ಸೌಲಭ್ಯ ಪರಿಚಯಿಸುತ್ತಿದ್ದು, ಸೋಮವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದರು.

ಕೋವಿಡ್-19 ಹರಡುವಿಕೆ ನಿಯಂತ್ರಿಸಲು ನಿರ್ಬಂಧಗಳು ಹೆಚ್ಚಾಗುತ್ತಿದ್ದು, ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಹಾಗೂ ಮರು ಸಮಾಲೋಚನೆಗೆ ಅಡ್ಡಿಯಾಗಿದೆ. ಇದನ್ನರಿತು ಆಸ್ಪತ್ರೆಯ ಆಡಳಿತ ಮಂಡಳಿ ರೋಗಿಗಳಿಗೆ ವಿಡಿಯೋ ಮೂಲಕ ಸಮಾಲೋಚನೆ ಮತ್ತು ಮರು ಸಮಾಲೋಚನೆ ಸೌಲಭ್ಯ ಒದಗಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ರೋಗಿಗಳು ಯಾವುದೇ ಸಮಯದಲ್ಲಿ ಉತ್ತಮ ವೈದ್ಯಕೀಯ ಸೇವೆ ಪಡೆಯಲು ಮೈ ಟೆಲಿ ಒಪಿಡಿ ಅಥವಾ ವಿಡಿಯೋ ಸಮಾಲೋಚನೆ ಪ್ರಬಲ ಸಾಧನವಾಗಿದೆ. ವಿಡಿಯೋ ಸಮಾಲೋಚನೆ ಸೌಲಭ್ಯದಡಿ ಸಾರ್ವಜನಿಕರು ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು.

ವೈದ್ಯರು ದೂರವಾಣಿ ಮೂಲಕ ಅಥವಾ ವಿಡಿಯೋ ಕರೆಯ ಮೂಲಕ ರೋಗಿಗಳಿಗೆ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ದೂರವಾಣಿ ಕರೆ ಮಾಡಿ ಎಲ್ಲ ವಿಭಾಗದ ವೈದ್ಯರನ್ನು ಸಂಪರ್ಕಿಸಬಹುದು. ಸಾರ್ವಜನಿಕರು 080–47192235ಗೆ ಕರೆ ಮಾಡಬೇಕು. ಇದರ ಜತೆಗೆ ಅಪಘಾತ ಹಾಗೂ ತುರ್ತು ಚಿಕಿತ್ಸಾ ಸೇವೆಗಳು ಆಸ್ಪತ್ರೆಯಲ್ಲಿ ಎಂದಿನಂತೆ ದಿನ 24 ಗಂಟೆ ಲಭ್ಯವಿದೆ ಎಂದು ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು