ಉಡುಪಿ: ಕಟಪಾಡಿಯ ಪೆಟ್ರೋಲ್ ಬಂಕ್ ಬಳಿ ಸೋಮವಾರ ಬೆಳಿಗ್ಗೆ ಬುಲೆಟ್ ಟ್ಯಾಂಕರ್ ಮಗುಚಿ ಅನಿಲ ಸೋರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಟ್ಯಾಂಕರ್ ಮಗುಚಿದ ಮಾಹಿತಿ ಅರಿತು ಮಲ್ಪೆ, ಉಡುಪಿ ಅಗ್ನಿಶಾಮಕ ದಳದವರು ಮತ್ತು ಅದಾನಿ ಯುಪಿಸಿಎಲ್ ಸಂಸ್ಥೆಯ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಅನಿಲ ಸೋರಿಕೆ ನಿಯಂತ್ರಣಕ್ಕಾಗಿ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರು ಕೂಡಲೇ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸುಮಾರು 18 ಟನ್ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್ ಮಂಗಳೂರಿನಿಂದ ಛತ್ತೀಸಗಢಕ್ಕೆ ತೆರಳುತ್ತಿತ್ತು. ಕಟಪಾಡಿಯಲ್ಲಿ ಅಂಡರ್ಪಾಸ್ ಕಾಮಗಾರಿ ಸ್ಥಳದಲ್ಲಿ ರಸ್ತೆ ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ಮಗುಚಿದೆ ಎಂದು ಮೂಲಗಳು ತಿಳಿಸಿವೆ.

ಅಗ್ನಿಶಾಮಕ ದಳದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ್, ಉಡುಪಿ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

ಮಂಗಳೂರಿನಿಂದ ಅನಿಲ ಕಂಪನಿಯ ತಜ್ಞರು ಟ್ಯಾಂಕರ್ಗಳೊಂದಿಗೆ ಬಂದು, ಮಗುಚಿ ಬಿದ್ದಿದ್ದ ಬುಲೆಟ್ ಟ್ಯಾಂಕರ್ನಲ್ಲಿದ್ದ ಅನಿಲವನ್ನು ಮೂರು ಟ್ಯಾಂಕರ್ಗಳಿಗೆ ತುಂಬಿಸುವ ಕಾರ್ಯವನ್ನು ಸೋಮವಾರ ಮಧ್ಯ ರಾತ್ರಿವರೆಗೂ ನಡೆಸಿದ್ದರು. ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಟ್ಯಾಂಕರ್ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Cut-off box - ‘ಒಂದು ಟನ್ ಅನಿಲ ಸೋರಿಕೆ ಸಾಧ್ಯತೆ’ ‘ಅಂದಾಜು 1 ಟನ್ನಷ್ಟು ಅಡುಗೆ ಅನಿಲ ಸೋರಿಕೆಯಾಗಿರುವ ಸಾಧ್ಯತೆ ಇದೆ. ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುತ್ತಿದ್ದಂತೆ ಅದಕ್ಕೆ ನಿರಂತರವಾಗಿ ನೀರು ಹಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದೇವೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್ ತಿಳಿಸಿದ್ದಾರೆ. ‘ಅನಿಲ ಸೋರಿಕೆಯಿಂದ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 90 ಟ್ಯಾಂಕ್ಗಿಂತಲೂ ಹೆಚ್ಚು ನೀರನ್ನು ಟ್ಯಾಂಕರ್ ಮೇಲೆ ಹಾಯಿಸಿದ್ದೇವೆ’ ಎಂದು ಅವರು ತಿಳಿಸಿದರು. ‘ಅನಿಲ ಸೋರಿಕೆಯಾಗಿರುವ ಸ್ಥಳದ ಸಮೀಪದ ಮನೆಗಳಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ. ಮನೆಯಲ್ಲಿ ಬೆಂಕಿ ಉರಿಸದಂತೆಯೂ ಎಚ್ಚರಿಕೆ ನೀಡಿದ್ದೆವು’ ಎಂದು ಅವರು ವಿವರಿಸಿದರು.

Cut-off box - ‘ಹೆದ್ದಾರಿಯಲ್ಲಿ ಸಿಲುಕಿಕೊಂಡ ಪ್ರಯಾಣಿಕರು’ ಟ್ಯಾಂಕರ್ ಅಪಘಾತದ ಬಳಿಕ ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಇದರಿಂದಾಗಿ ಮಣಿಪುರ ಅಲೆವೂರು ಕಟಪಾಡಿ ಹಳೆರಸ್ತೆ ಉದ್ಯಾವರ ಮೊದಲಾದ ಪರ್ಯಾಯ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಹೆದ್ದಾರಿಯಲ್ಲಿ ವಾಹನಗಳಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಸೋಮವಾರ ರಾತ್ರಿವರೆಗೂ ವಾಹನಗಳು ಬದಲಿ ಮಾರ್ಗದಲ್ಲೇ ಸಂಚರಿಸಿದವು. ಮಂಗಳೂರಿನಿಂದ ಉಡುಪಿಗೆ ಹೋಗುವ ವಾಹನಗಳು ಕಾಪುವಿನಿಂದ ಶಿರ್ವ ಮೂಡುಬೆಳ್ಳೆ ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಹಾಗೂ ಪಡುಬಿದ್ರಿ ಬೆಳ್ಮಣ್ ಶಿರ್ವ ಮಾರ್ಗವಾಗಿಯೂ ವಾಹನಗಳು ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಸಂಚರಿಸಿದವು. ಇದರಿಂದಾಗಿ ಉಡುಪಿ ಮಂಗಳೂರು ನಡುವೆ ಸಂಚರಿಸಿದ ಪ್ರಯಾಣಿಕರಿಗೆ ತೊಂದರೆಯಾಯಿತು. ಉಡುಪಿಯಿಂದ ಮಂಗಳೂರಿಗೆ ತೆರಳುವ ವಾಹನಗಳು ಮಣಿಪಾಲದಿಂದ ಮಣಿಪುರ ಮೂಡುಬೆಳ್ಳೆ ಶಿರ್ವ ಮಾರ್ಗವಾಗಿ ಕಾಪುವಿಗೆ ತೆರಳಿ ಅಲ್ಲಿಂದ ಮಂಗಳೂರು ಕಡೆಗೆ ಸಂಚಾರ ನಡೆಸಿದವು. ಮಣಿಪಾಲದಿಂದ ಶಿರ್ವ - ಬೆಳ್ಮಣ್ ಮಾರ್ಗವಾಗಿಯೂ ಪಡುಬಿದ್ರಿಗೆ ಬಂದು ಅಲ್ಲಿಂದಲೂ ಕೆಲವು ವಾಹನಗಳು ಮಂಗಳೂರಿಗೆ ತೆರಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.