ಶಿರ್ವ: ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ಕಟಪಾಡಿಯ ಪರಿಸರವಾದಿ ಕೆ. ಮಹೇಶ್ ಶೆಣೈ ಅವರ ಮನೆ ನಿವೇಶನದಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ರೈಸಿಂಗ್ ರೋಸ್ ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಸುಧೀರ್ ನಾಯಕ್ ಕಟಪಾಡಿ ಹಾಗೂ ಆಸ್ಟ್ರೇಲಿಯಾದ ಕ್ರಿಕೆಟ್ ಕೋಚ್ಗಳಾದ ರಿಚರ್ಡ್ ಕ್ಲಿಪ್ಟನ್, ಜೇಸನ್ ಕಾಕ್ಸ್ ಮತ್ತು ಮಿಚ್ ಡೇವಿ ಮುಖ್ಯ ಅತಿಥಿಗಳಾಗಿದ್ದರು.

ಮಹೇಶ್ ಶೆಣೈ ಮಾತನಾಡಿ, ಶುದ್ಧ ಗಾಳಿ ಮತ್ತು ಶುದ್ಧ ಪರಿಸರ, ಆರೋಗ್ಯ ವೃದ್ಧಿಗೆ ಮಿಯಾವಾಕಿ ವನ ಅಗತ್ಯವಾಗಿದೆ. ಯುವಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕಟಪಾಡಿ ಪಟ್ಟಣದಲ್ಲಿ 30 ಸೆಂಟ್ಸ್ ಜಾಗದಲ್ಲಿ ಕ್ರಿಕೆಟ್ ಬ್ಯಾಟ್ ಮಾದರಿಯಲ್ಲಿ ಮಿಯಾವಾಕಿ ವನವನ್ನು ರೂಪಿಸಲಾಗುತ್ತಿದೆ ಎಂದರು.

ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ತನಕ ಕ್ರಿಕೆಟ್ಗೆ ಹೆಚ್ಚಿನ ಆಸಕ್ತಿ ಇರುವ ಕಾರಣ, ಇದೇ ಆಸಕ್ತಿಯನ್ನು ಪರಿಸರ ಜಾಗೃತಿಗೆ ಬಳಸುವ ಉದ್ದೇಶದಿಂದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಈ ವನ ನಿರ್ಮಾಣವಾಗಲಿದೆ ಎಂದು ಹೇಳಿದರು. ಗಣೇಶ್ ಪೈ, ಪರಿಸರವಾದಿ ಪ್ರೇಮಾನಂದ ಕಲ್ಮಾಡಿ, ರಮೇಶ್ ಕಿಣಿ, ಶರಾವತಿ ರವಿ ರಾಜ್, ಅವಿನಾಶ್ ಕಾಮತ್, ಸುಧಾಕರ್ ಕಿಣಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-28-1002874228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.