ಶಿರ್ವ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ಪಾಸ್ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಹೆದ್ದಾರಿಯ ಟ್ರಾಫಿಕ್ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಅಂಡರ್ಪಾಸ್ ರಸ್ತೆಯ ಒಂದು ಭಾಗದಲ್ಲಿ ರಸ್ತೆ ನಿರ್ಮಾಣ, ಕಾಂಕ್ರೀಟ್ ಗೋಡೆ ನಿರ್ಮಾಣ, ನೀರು ಹರಿವಿಗಾಗಿ ಡ್ರೈನೇಜ್ ವ್ಯವಸ್ಥೆ, ಸರ್ವಿಸ್ ರಸ್ತೆ ನಿರ್ಮಾಣ ಮುಂತಾದ ಕೆಲಸಗಳು ಭರದಿಂದ ಸಾಗುತ್ತಿವೆ.

ಅಂಡರ್ಪಾಸ್ ಕಾಮಗಾರಿ ನಡೆಯುತ್ತಿರುವುದರಿಂದ ಉಡುಪಿ– ಮಂಗಳೂರು ಕಡೆ, ಶಿರ್ವ– ಮಟ್ಟು ಕಡೆ ತೆರಳುವ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಎರಡೂ ಕಡೆ ಸರ್ವಿಸ್ ರಸ್ತೆಗೆ ತಿರುಗಿಸಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಎದ್ದು ಹೋಗಿ ಸಮಸ್ಯೆಯಾಗಿದೆ. ಅಗಲ ಕಿರಿದಾದ ಸರ್ವಿಸ್ ರಸ್ತೆಯಿಂದಾಗಿ ಕೆಲವೊಮ್ಮೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ತಿರುವು ಪಡೆಯುವಲ್ಲಿ ಘನ ವಾಹನಗಳು ತಿರುಗಲು ಸಮಸ್ಯೆಯಾಗುತ್ತಿದೆ.

ಕಳೆದ ವಾರ ಈ ಕಾರಣದಿಂದಾಗಿ ಹೆದ್ದಾರಿ ಮಧ್ಯೆ ಅನಿಲ ಟ್ಯಾಂಕರ್ ಒಂದು ಉರುಳಿ ಬಿದ್ದು ಬೆಳಿಗ್ಗೆಯಿಂದ ರಾತ್ರಿವರೆಗೆ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯಿಂದ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು. ಎರಡೂ ಕಡೆಗಳಿಂದ ಹೆದ್ದಾರಿ ದಾಟಿಕೊಂಡು ಬಸ್ ಹಿಡಿಯಲು ಬರುವ ಪಾದಾಚಾರಿಗಳ ಪಾಡಂತೂ ಹೇಳತೀರದು.

ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಡುಪಿ– ಮಂಗಳೂರು ನಡುವೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಕಟಪಾಡಿ ಜಂಕ್ಷನ್ನಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಅಂಡರ್ಪಾಸ್ ಕಾಮಗಾರಿಯ ವೇಗ ಹೆಚ್ಚಿದ್ದು, ಮಂಗಳೂರು– ಉಡುಪಿ ಸಂಪರ್ಕಿಸುವ ಏಕಮುಖ ಹೆದ್ದಾರಿ ಪೂರ್ಣಗೊಂಡು ಮೊದಲ ಹಂತದ ಕಾಂಕ್ರೀಟೀಕರಣಕ್ಕೆ ಸಿದ್ಧತೆ ನಡೆದಿದೆ.

ಕಟಪಾಡಿ ಜಂಕ್ಷನ್, ಉಡುಪಿ, ಮಂಗಳೂರು, ಶಿರ್ವ, ಮಣಿಪಾಲ, ಕೋಟೆ, ಮಟ್ಟು ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಇದಾಗಿದ್ದು, ಟ್ರಾಫಿಕ್ ನಿಯಂತ್ರಣ ದೊಡ್ಡ ಸವಾಲಾಗಿತ್ತು. ಬೆಳಿಗ್ಗೆ, ಸಂಜೆ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತ ಸಂಭವಿಸುತ್ತಿದ್ದವು. ಹೆದ್ದಾರಿಯಲ್ಲಿ ಪೊಲೀಸರು ವಾಹನ ನಿಯಂತ್ರಿಸಲು ಹರಸಾಹಸ ಪಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಅಂಡರ್ಪಾಸ್ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿತ್ತು. ಅಂಡರ್ಪಾಸ್ ಯೋಜನೆ ಪೂರ್ಣಗೊಂಡ ಬಳಿಕ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮೇಲ್ಭಾಗದಲ್ಲಿ ಸಂಚರಿಸಲಿದ್ದು, ಸ್ಥಳೀಯ ವಾಹನಗಳು ಅಂಡರ್ಪಾಸ್ ಮೂಲಕ ಸಂಚರಿಸಲಿವೆ. ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಅಪಘಾತಗಳೂ ಕಡಿಮೆಯಾಗಲಿವೆ. ಉಡುಪಿ– ಮಂಗಳೂರು ಪ್ರಯಾಣ ಸಮಯವೂ ತಗ್ಗಲಿದೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಡಾ.ಯು.ಕೆ.ಶೆಟ್ಟಿ ಹೇಳಿದರು.

₹17 ಕೋಟಿ ವೆಚ್ಚದ ಯೋಜನೆ

ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಉಡುಪಿ– ಕಿನ್ನಿಮೂಲ್ಕಿ ಅಂಡರ್ಪಾಸ್ ಯೋಜನೆ ಕಾಮಗಾರಿ ಕಳೆದ ನವೆಂಬರ್ನ ಅಂತ್ಯದಲ್ಲಿ ಪ್ರಾರಂಭವಾಗಿದೆ. ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭಿಸುವ ಯೋಜನೆಯಿತ್ತು, ಭಾರಿ ಮಳೆಯಿಂದ ವಿಳಂಬವಾಗಿ ನವೆಂಬರ್ನಲ್ಲಿ ಆರಂಭಿಸಲಾಯಿತು. ಕಳೆದ ಮಾರ್ಚ್ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಅಂದಾಜು ₹17 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಂಡರ್ಪಾಸ್ 550 ಮೀ. ಉದ್ದ, 5.5 ಮೀ. ಎತ್ತರವಿದೆ. ನ್ಯಾಷನಲ್ ಇನ್ಫ್ರಾ ಪ್ರಾಜೆಕ್ಟ್ ಕಂಪನಿ ಕಾಮಗಾರಿ ನಡೆಸುತ್ತಿದೆ. ಮುಂದಿನ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.