ಪಡುಬಿದ್ರಿ: ಕಾಪು ಪುರಸಭೆಗೆ ಮುಂದಿನ 11 ತಿಂಗಳಿಗೆ ಅಧ್ಯಕ್ಷೆಯಾಗಿ ಮೋಹಿನಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ತಹಶೀಲ್ದಾರ್ ಅನಂತಶಂಕರ ಬಿ. ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೋಹಿನಿ ಶೆಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆಯನ್ನು ಘೋಷಿಸಲಾಯಿತು. ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಿಬ್ಬಂದಿ ಸಹಕರಿಸಿದರು. ಬಿಜೆಪಿಯ ಎಲ್ಲಾ 13, ಜೆಡಿಎಸ್ ಹಾಗೂ ಎಸ್ಡಿಪಿಐನ ಒಬ್ಬ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ನ 7, ಎಸ್ಡಿಪಿಐನ ಓರ್ವ ಸದಸ್ಯ ಗೈರಾಗಿದ್ದರು.

‘ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಸಹಿತ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಪುರಸಭೆ ಕಚೇರಿಯಲ್ಲಿ ಜನರಿಗೆ ತ್ವರಿತ ಸೇವೆಗೆ ಒತ್ತು, ಕಚೇರಿಯ ಆವರಣ ಗೇಟ್, ಲಿಫ್ಟ್ ದುರಸ್ತಿಗೆ ಕ್ರಮ ವಹಿಸಲಾಗುವುದು. ಸದಸ್ಯರೆಲ್ಲರೂ ಶಿಷ್ಟಾಚಾರ ಪಾಲಿಸಿ ಸಭೆ ಕಾರ್ಯಕಲಾಪ ಯಶಸ್ವಿಯಾಗಿ ನಡೆಯುವಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಮೋಹಿನಿ ಶೆಟ್ಟಿ ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡ ಲಾಲಾಜಿ ಆರ್. ಮೆಂಡನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಸದಸ್ಯ ಅರುಣ್ ಶೆಟ್ಟಿ ಶುಭ ಹಾರೈಸಿದರು. ಉಪಾಧ್ಯಕ್ಷೆ ಸರಿತಾ, ಪಕ್ಷದ ಪ್ರಮುಖರಾದ ಶಿಲ್ಪಾ ಜಿ. ಸುವರ್ಣ, ನೀತಾ ಗುರುರಾಜ್, ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ, ಚಂದ್ರ ಮಲ್ಲಾರ್, ನಜೀರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-28-1206699608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.