ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿಯಲ್ಲಿ ಮಕ್ಕಳ ಮೂತ್ರಪಿಂಡ ವಿಭಾಗ ಉದ್ಘಾಟನೆ

Last Updated 11 ಮಾರ್ಚ್ 2021, 16:30 IST
ಅಕ್ಷರ ಗಾತ್ರ

ಉಡುಪಿ: ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಗುರುವಾರ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ ಹಾಗೂ ಮೂತ್ರಪಿಂಡ ಕಾಯಿಲೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಸ್ತೂರಬಾ ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ.ಪುಷ್ಪಾ ಜಿ.ಕಿಣಿ ವಿಭಾಗ ಉದ್ಘಾಟಿಸಿ ಮಾತನಾಡಿ, ‘ಮೂತ್ರಪಿಂಡ ಕಾಯಿಲೆ ಇರುವವರು ಉತ್ತಮ ಜೀವನ ನಡೆಸಲು ಎಂಟು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ನಿಯಮಿತ ವೈದ್ಯರ ಭೇಟಿ ಮತ್ತು ಕಿಡ್ನಿ ಪರೀಕ್ಷೆ, ಧೂಮಪಾನದಿಂದ ದೂರ, ಪೌಷ್ಠಿಕಾಂಶವುಳ್ಳ ಪಥ್ಯಾಹಾರ ಸೇವನೆ, ರಕ್ತದೊತ್ತಡ ನಿಯಂತ್ರಣ, ರಕ್ತದ ಸಕ್ಕರೆ ಅಂಶ ನಿಯಂತ್ರಣ, ಅಗತ್ಯ ಪ್ರಮಾಣದ ನೀರು ಕುಡಿಯಬೇಕು. ವೈದ್ಯರ ಸಲಹೆ ಪಡೆಯದೆ ಮಾತ್ರೆ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಮೂತ್ರಪಿಂಡ ಕಾಯಿಲೆ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಂಸಿ ಡೀನ್ ಡಾ.ಶರತ್ ಕೆ ರಾವ್ ‘ಪ್ರತಿ ವರ್ಷ ಮಾರ್ಚ್ ಎರಡನೇ ಗುರುವಾರವನ್ನು ಮೂತ್ರ ಪಿಂಡ ದಿನವನ್ನಾಗಿ ಆಚರಿಸಲಾಗುತ್ತದೆ. ಜೀವನ ಶೈಲಿಯ ಬದಲಾವಣೆಯಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆ ಬರಲಿದ್ದು, ಕಿಡ್ನಿಗಳ ಮೇಲೆ ಪರಿಣಾಮ ಬೀರುತ್ತವೆ. ತಕ್ಷಣ ಜಾಗೃತಿ ವಹಿಸಿದರೆ ಶೇ 50ರಷ್ಟು ಕಿಡ್ನಿ ಕಾಯಿಲೆ ಕಡಿಮೆ ಮಾಡಬಹುದು. ಈಚೆಗಿನ ಸಂಶೋಧನೆ ಪ್ರಕಾರ ಕೈಗಾರಿಕಾ ತ್ಯಾಜ್ಯದಿಂದ ಬೆಳೆದ ಆಹಾರ ಪದಾರ್ಥವೂ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತಿದೆ. ವರ್ಷಕೊಮ್ಮೆ ಕಿಡ್ನಿ ಪರೀಕ್ಷಿಸಿಕೊಳ್ಳಬೇಕು ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಮುತ್ತನ್ನ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಂಕರ್ ಪ್ರಸಾದ್, ಮಕ್ಕಳ ವಿಭಾಗದಪ್ರಾಧ್ಯಾಪಕ ಡಾ. ಲೆಸ್ಲಿ ಲೀವಿಸ್ ಇದ್ದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಂಜುನಾಥ್, ಡಾ.ರವೀಂದ್ರ ಪ್ರಭು ಡಾ.ದರ್ಶನ್ ರಂಗಸ್ವಾಮಿ, ಡಾ.ನವೀನ್ ಎಸ್ ಸಲೀನ್ಸ್ ಇದ್ದರು.

ಮಕ್ಕಳ ಮೂತ್ರಪಿಂಡ ವಿಭಾಗವನ್ನು ತಜ್ಞ ಡಾ. ದರ್ಶನ್ ರಂಗಸ್ವಾಮಿ ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯ ರಾಯಲ್ ಆಸ್ಟ್ರೇಲಿಯನ್ ಕಾಲೇಜ್ ಆಫ್ ಫಿಸಿಶಿಯನ್‌ನಿಂದ ಅನುಮೋದಿಸಲಾಗಿರುವ ಪಿಡಿಯಾಟ್ರಿಕ್ ನೆಫ್ರಾಲಜಿಯಲ್ಲಿ ಕ್ಲಿನಿಕಲ್ ಫೆಲೋಶಿಪ್ ಪಡೆಡಿದ್ದಾರೆ ದರ್ಶನ್‌. ಪ್ರತಿ ಸೋಮವಾರ ಮತ್ತು ಶುಕ್ರವಾರ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಹೊಸ ವಿಭಾಗದ ಪ್ರಯುಕ್ತ ಮಾರ್ಚ್ 31ರವರೆಗೆ ಉಚಿತ ಸಮಾಲೋಚನೆ ಮತ್ತು ಪ್ರಯೋಗಾಲಯ ಶುಲ್ಕದಲ್ಲಿ ಶೇ 30 ರಿಯಾಯಿತಿ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT