ಬ್ರಹ್ಮಾವರ: ಶ್ರೀಬ್ರಾಹ್ಮಿ ಗ್ರೂಪ್ಸ್ ಕೋಡಿ ಕನ್ಯಾಣ, ವಿಶ್ವ ಮಾನವ ಫೌಂಡೇಷನ್ ಗುರುಮಿಠಕಲ್, ತಸ್ಮಯ್ ಪ್ರೊಡಕ್ಷನ್ಸ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕೋಡಿ ಕನ್ಯಾಣದ ಮಹಾಸತೀಶ್ವರೀ ದೇವಸ್ಥಾನದ ಹತ್ತಿರ ಇದೇ 19ರಂದು ಜನಪದ ಸಿರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕೋಟ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್ ಅವರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ 200ಕ್ಕೂ ಅಧಿಕ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಡೊಳ್ಳು ಕುಣಿತ, ವೀರಗಾಸೆ, ಹುಲಿವೇಷ, ಪೂಜಾ ಕುಣಿತ, ಯಕ್ಷಗಾನ ನೃತ್ಯ ವೈಭವ, ಕಂಗಿಲು, ಕುಡುಬಿ ನೃತ್ಯ, ಲಂಬಾಣಿ ನೃತ್ಯ, ಕಂಸಾಳೆ, ಕರಗ ಕೋಲಾಟ ಸೇರಿದಂತೆ ಹತ್ತಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಪ್ರದರ್ಶನ ನಡೆಯಲಿದೆ. ಮರೆಯಾಗುತ್ತಿರುವ ಜಾನಪದ ಖಾದ್ಯಗಳನ್ನು ಸವಿಯಲು ಸಂಜೆ 6ರಿಂದ 7ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಉದ್ಯಮಿ ಶಂಕರ್ ಕುಂದರ್ ಮಾತನಾಡಿ, ‘ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನಪದ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿತ್ತು. ಜನಪದ ಕಲೆಗಳ ಸ್ಪರ್ಧೆಗಳನ್ನು ನಡೆಸಿ, ರಾಜ್ಯದಾದ್ಯಂತ ಕಲೆ ಉಳಿಸಿ ಬೆಳೆಸಲು ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ತೀರ್ಪುಗಾರರ ರಾಜಕೀಯದಿಂದ ಜನಪದ ಸ್ಪರ್ಧೆಗಳಿಗೆ ಯುವಜನರು ಮತ್ತು ಯುವಕ ಮಂಡಲಗಳು ಮನಸ್ಸು ಮಾಡುತ್ತಿಲ್ಲ’ ಎಂದು ಹೇಳಿದರು.

ಶಂಕರ್ ಬಂಗೇರ, ಸತೀಶ್ ತಿಂಗಳಾಯ, ವಸಂತ್ ಪುತ್ರನ್, ಲೋಕೇಶ್ ಮೆಂಡನ್, ಉದಯ್ ಸುವರ್ಣಾ, ರಾಘವೇಂದ್ರ ಕರ್ಕೇರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-28-133968386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.