ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರು ಮೂಕಾಂಬಿಕಾ ದೇಗುಲ: 52 ದಿನಗಳಲ್ಲಿ ₹1.36 ಕೋಟಿ ಸಂಗ್ರಹ

Last Updated 11 ನವೆಂಬರ್ 2021, 20:17 IST
ಅಕ್ಷರ ಗಾತ್ರ

ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ 52 ದಿನಗಳಲ್ಲಿ ₹1.36 ಕೋಟಿ ಸಂಗ್ರಹವಾಗಿದೆ.

ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ದೇಗುಲದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿದ್ದರಿಂದ ಆದಾಯ ಕುಂಠಿತವಾಗಿತ್ತು. ಕಳೆದ 2 ತಿಂಗಳಿನಿಂದ ನಿರ್ಬಂಧ ಸಡಿಲಿಸಿದ್ದು, ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯ ಭಕ್ತರು ಹರಕೆಯೊಡನೆ ದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣಗಳನ್ನೂ ಸಮರ್ಪಿಸುತ್ತಿದ್ದಾರೆ ಎಂದು ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್ ತಿಳಿಸಿದ್ದಾರೆ.

ಕಾಣಿಕೆ: ನ.10ರಂದು ನಡೆದ ಕಾಣಿಕೆ ಹುಂಡಿ ಲೆಕ್ಕಾಚಾರದಲ್ಲಿ 585 ಗ್ರಾಂ ಚಿನ್ನ ಹಾಗೂ 6.4 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿ ವೇಳೆ ನಡೆದ ಲೆಕ್ಕಾಚಾರದಲ್ಲಿ ₹92 ಲಕ್ಷ, 615 ಗ್ರಾಂ ಚಿನ್ನ ಹಾಗೂ 3.5 ಕೆ.ಜಿ. ಬೆಳ್ಳಿ ಸಂಗ್ರಹವಾಗಿತ್ತು. ಇದೀಗ ಕೇವಲ 52 ದಿನಗಳಲ್ಲಿ ₹1.36 ಕೋಟಿ ಸಂಗ್ರಹವಾಗಿರುವುದು ದಾಖಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT