ಕಾಪು (ಪಡುಬಿದ್ರಿ): ‘ಕೊರಗರ ಕೂಡು ಕುಟುಂಬದ ಕಟ್ಟು ಕಟ್ಲೆಗಳು- ಆರಾಧನೆ ಮತ್ತು ಆಚರಣೆ’ ಎಂಬ ಮಾರ್ಗದರ್ಶಕ ಪುಸ್ತಕವನ್ನು ಇತ್ತೀಚೆಗೆ ಪಾಂಗಾಳ ಕೊರಗರ ದೈವ ಸನ್ನಿಧಿದಲ್ಲಿ ಬಿಡುಗಡೆ ಮಾಡಲಾಯಿತು.

ಕೂಡು ಕುಟುಂಬದ ಹಿರಿಯ ಮಹಿಳೆಯರಾದ ಗುರ್ಬಿ ಹಾಗೂ ಅಮಣಿ ಅವರು ಜಂಟಿಯಾಗಿ ಪುಸ್ತಕ ಬಿಡುಗಡೆ ಮಾಡಿದರು.

ಪಡುಬಿದ್ರಿ ಗುರಿಕಾರ ಕುಡುಪ ಮಾತನಾಡಿ, ಕೊರಗ ಸಮುದಾಯದಲ್ಲಿ ಇದೊಂದು ಹೊಸ ಪ್ರಯತ್ನ. ಸಮುದಾಯದ ನೀತಿ ನಿಯಮಗಳನ್ನು ಒಟ್ಟುಗೂಡಿಸಿ, ಪುಸ್ತಕ ರೂಪದಲ್ಲಿ ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನ ಇತರರಿಗೂ ಮಾದರಿಯಾಗಿದೆ ಎಂದರು.

ಪಾದೆಬೆಟ್ಟು ಬಲೆಪಿನ ಪ್ರತಿನಿಧಿ ಸೋಮಶೇಖರ್, ಮುಂಡ್ಕೂರು ಬಲೆಪಿನ ಗುರಿಕಾರ ಅಣ್ಣು ಸಾಲ್ಯಾನ್, ಕುರ್ಕಾಲು ಬಲೆಪಿನ ಗುರಿಕಾರ ಸುರೇಶ್ ಕುಂದರ್ ಮಾತನಾಡಿದರು.

ಸಚ್ಚೆರಿ ಪೇಟೆಯ ಕರ್ಣ ಸಾಲ್ಯಾನ್, ಕಬ್ಯಾಡಿ ಬಲೆಪಿನ ಶಂಭು, ಪಾಂಗಾಳ ಕುಟುಂಬದ ಹಿರಿಯರಾದ ಕುಡ್ಡು ಕೊರಗ, ಗುರುವ ಮೂಡುಬೆಳ್ಳೆ, ಅಣ್ಣು ಕಡಂದಲೇ ಉಪಸ್ಥಿತರಿದ್ದರು.

ಕುಟುಂಬದ ಗುರಿಕಾರ ವಸಂತ ಪಾಂಬೂರು ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಮತ್ತು ತಂಡ ಪ್ರಾರ್ಥನಾ ಗೀತೆ ಹಾಡಿದರು. ಅಣ್ಣು ಪಿಲಾರ್ ವಂದಿಸಿದರು. ಜ್ಯೋತಿ ಪಾಂಬೂರು ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-28-113643874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.