ಭಾನುವಾರ, ಸೆಪ್ಟೆಂಬರ್ 22, 2019
25 °C

ಬಿಜೆಪಿಯತ್ತ ಹಲವರು ವಾಲಿದ್ದಾರೆ: ಕೋಟ

Published:
Updated:
Prajavani

ಉಡುಪಿ: ಬಿಜೆಪಿ ಸಮೃದ್ಧ ಹಾಗೂ ವ್ಯವಸ್ಥಿತ ಆಡಳಿತ ಕೊಡುತ್ತದೆ ಎಂಬ ಭಾವನೆ ಮೂಡಿರುವುದರಿಂದ ಜಿ.ಟಿ.ದೇವೇಗೌಡರು ಮಾತ್ರವಲ್ಲ; ಹಲವರು ಮಾನಸಿಕವಾಗಿ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಕ್ಷ ಸೇರ್ಪಡೆ ವಿಚಾರದಲ್ಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತೀರ್ಮಾನ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳು ಬಿಜೆಪಿಗೆ ಶುಭ ತರಲಿದೆ ಎಂದರು.

ಬಿಜೆಪಿ ಸರ್ಕಾರ ಮೂರುವರೆ ವರ್ಷ ಪೂರೈಸಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೋಟ ಭವಿಷ್ಯ ನುಡಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸುಕುಮಾರ ಶೆಟ್ಟಿ ಅವರು ವೈಯಕ್ತಿಕ ಅನುಮತಿ ಪಡೆದು ಗೈರಾಗಿದ್ದಾರೆ. ಪಕ್ಷದಲ್ಲಿ ಗೊಂದಲಗಳಿಲ್ಲ ಎಂದರು.

Post Comments (+)