ಸೋಮವಾರ, ಸೆಪ್ಟೆಂಬರ್ 20, 2021
23 °C
ಕೋಟ ಶ್ರೀನಿವಾಸ ಪೂಜಾರಿ ಅಭಿಮಾನಿಗಳು

ಪಾದಯಾತ್ರೆಯ ಹರಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ರಾಜ್ಯ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅಭಿಮಾನಿಗಳು ಹಾಗೂ ಆಪ್ತರು ಕೋಟದಿಂದ ಮಾರಣಕಟ್ಟೆಗೆ ವರೆಗೆ ಪಾದಯಾತ್ರೆ ಮಾಡಿ ಹರಕೆ ತೀರಿಸಿದರು.

ಗುರುವಾರ ಬೆಳಿಗ್ಗೆ ಕೋಟ ಅಮೃತೇಶ್ವರಿ ದೇವಸ್ಥಾನದಿಂದ ಹೊರಟು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದ ಅಭಿಮಾನಿಗಳು ದೇವರಿಗೆ ಪೂಜೆ ಸಲ್ಲಿಸಿದರು.

 ಸಚಿವ ಕೋಟ ಅವರ ಆಪ್ತ ಸಹಾಯಕ ಹರೀಶಕುಮಾರ್ ಶೆಟ್ಟಿ, ರಂಜಿತ್ ಪೂಜಾರಿ, ಅಭಿಮಾನಿಗಳಾದ ಪ್ರಸಾದ್ ಬಿಲ್ಲವ, ಸುದಿನ ಕೋಡಿ, ರಾಮಕೃಷ್ಣ ಶೆಟ್ಟಿ ಗುಡ್ರಿ, ಸಂದೀಪ್ ಕೊಲ್ಲೂರು, ಶೇಖರ್ ಪೂಜಾರಿ ಗೋಳಿಹೊಳೆ, ಮಹೇಶ್ ಹಟ್ಟಿಕುದ್ರು, ಸಾಯಿಕುಮಾರ್, ನಾಗರಾಜ್ ಗೋಳಿಹೊಳೆ, ಸೀತಾರಾಮ್, ಸೂರಜ್ ಶೆಟ್ಟಿ , ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್ ಇದ್ದರು.

 ‘ಶ್ರೀನಿವಾಸ ಪೂಜಾರಿ ಮುಜರಾಯಿ ಸಚಿವರಾಗಿದ್ದಾಗ ದೇವಸ್ಥಾನ ಹಾಗೂ ಮಠ–ಮಂದಿರಗಳ ಅಭಿವೃದ್ಧಿಗೆ  ವಿಶೇಷ ಅನುದಾನ ನೀಡಿದ್ದರು. ಅವರು ಪುನಃ ಸಚಿವರಾದರೆ, ಕೋಟದಿಂದ ಮಾರಣಕಟ್ಟೆ ದೇವಸ್ಥಾನಕ್ಕೆ‌ ಪಾದಯಾತ್ರೆ ಮಾಡಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ ಎಂದು ಹರಕೆ ಹೊತ್ತು, ಈಗ ಅದನ್ನು ಸಮರ್ಪಿಸಿದ್ದೇವೆ’ ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.