ಭಾನುವಾರ, ಆಗಸ್ಟ್ 25, 2019
24 °C
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ

‘ಸಂಪುಟ ವಿಸ್ತರಣೆಗಿಂತ ಸಂತ್ರಸ್ತರ ರಕ್ಷಣೆ ಮುಖ್ಯ’

Published:
Updated:
Prajavani

ಉಡುಪಿ: ಬಿಜೆಪಿ ಸರ್ಕಾರಕ್ಕೆ ಸಂಪುಟದ ಸಂಭ್ರಮಕ್ಕಿಂತ ಸಂತ್ರಸ್ತರ ರಕ್ಷಣೆ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್‌ ಮುಖಂಡ ಉಗ್ರಪ್ಪಗೆ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 17 ದಿನ ಕಳೆದರೂ ಸಂಪುಟ ರಚನೆಯಾಗಿಲ್ಲ. ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಉಗ್ರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದ 4 ದಿನಗಳಲ್ಲಿ ರಾಜ್ಯದಲ್ಲಿ ಜಲಪ್ರಳಯ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಸಚಿವ ಸಂಪುಟದ ಸಂಭ್ರಮಾಚರಣೆಗಿಂತ, ಸಂತ್ರಸ್ತರ ರಕ್ಷಣೆ ಸರ್ಕಾರಕ್ಕೆ ಮುಖ್ಯ ಎಂದು ಎದಿರೇಟು ನೀಡಿದ್ದಾರೆ.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜಿಲ್ಲೆಯ ಜನರ ಸಂಕಷ್ಟಕ್ಕೆ ನಿಂತಿದ್ದಾರೆ. ಉಗ್ರಪ್ಪ, ಡಿ.ಕೆ.ಶಿವಕುಮಾರ್‌ ಅವರು ಜನಸಾಮಾನ್ಯರ ಬದುಕು ಕಟ್ಟಿಕೊಡುವಲ್ಲಿ ಸರ್ಕಾರದ ಧಾವಂತವನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಪ್ರವಾಹದ ಸಂದರ್ಭ ಪಕ್ಷ ಭೇದ ಮರೆತು ಶಾಸಕರು ಸಂತ್ರಸ್ತರ ಪರವಾಗಿ ನಿಂತಿರುವಾಗ, ವಿರೋಧ ಪಕ್ಷಗಳು ಟೀಕೆ ಮಾಡುವುದು ಸರಿಯಲ್ಲ. ಬದಲಾಗಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಬೇಕು ಎಂದು ಒತ್ತಾಯಿಸಿದ್ದಾರೆ. 

Post Comments (+)