ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಕುಂದಾಪುರದ ದಂಪತಿಗೆ ಚೂರಿ ಇರಿತ: ಪತಿಯ ಸಾವು, ಪತ್ನಿಗೆ ತೀವ್ರ ಗಾಯ

Last Updated 7 ಆಗಸ್ಟ್ 2019, 4:48 IST
ಅಕ್ಷರ ಗಾತ್ರ

ಕುಂದಾಪುರ: ಜರ್ಮನಿಯ ಮ್ಯೂನಿಚ್‌ನಲ್ಲಿ ಇರುವ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾದ ಕುಂದಾಪುರದಲ್ಲಿ ಮನೆಯನ್ನು ಹೊಂದಿರುವ ಬಿ.ವಿ.ಪ್ರಶಾಂತ (49) ಹಾಗೂ ಸ್ಮಿತಾ (40) ದಂಪತಿ ಮೇಲೆ ಶುಕ್ರವಾರ ಅಪರಿಚಿತನೊಬ್ಬ ಚೂರಿಯಿಂದ ಇರಿದ ಪರಿಣಾಮ ಪ್ರಶಾಂತ ಮೃತ ಪಟ್ಟಿದ್ದು, ಸ್ಮಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜರ್ಮನಿಯಲ್ಲಿ ನಡೆದಿರುವ ಕೃತ್ಯದ ಕುರಿತು ಅವರ ಕುಟುಂಬ ಸದಸ್ಯರಿಗೆ ಪೂರ್ಣ ಮಾಹಿತಿ ಇಲ್ಲ. ಮನೆಯಿಂದ ಇಳಿದು ಬರುತ್ತಿದ್ದಾಗ ವ್ಯಕ್ತಿಯೊಬ್ಬನ ಚೂರಿ ಇರಿತಕ್ಕೆ ಪ್ರಶಾಂತ ಬಲಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಸ್ಮಿತಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಚೇತರಿಕೆ ಕನಿಷ್ಠ 3 ವಾರಗಳು ಬೇಕಾಗಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿರುವುದಾಗಿ ಪ್ರಶಾಂತ ಅವರ ಸಹೋದರಿ ಸಾಧನ ಅವರ ಪತಿ ಶ್ರೀನಿವಾಸ ’ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ಪ್ರಶಾಂತ ಅವರ ತಂದೆ ದಿ.ಬಿ.ಎನ್‌.ವೆಂಕಟರಮಣ (ಪಾಪಣ್ಣ) ಹಾಗೂ ತಾಯಿ ವಿನಯ (ಬೇಬಿ) ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ವ್ಯವಹಾರ ಹಾಗೂ ಕೃಷಿ ಕಾರ್ಯಗಳಿಗಾಗಿ ಅವರ ಕುಟುಂಬ ಸಾಗರದಲ್ಲಿ ನೆಲೆಸಿದ್ದರು. ವೆಂಕಟರಮಣ ಅವರ ಪೂರ್ವಿಕರು ಕುಂದಾಪುರ ಸಮೀಪದ ಬಸ್ರೂರಿನವರಾಗಿದ್ದರಿಂದ ಕುಟುಂಬ ಸದಸ್ಯರ ಹೆಸರಿನೊಂದಿಗೆ ಬಸ್ರೂರು ಉಳಿದುಕೊಂಡಿದೆ. ಸ್ಮಿತಾ ಅವರ ತಂದೆ ಕುಂದಾಪುರ ಪ್ರಶಾಂತ ಅವರ ಅವರು ಎಂಜಿನಿಯರಿಂಗ್‌ ಪದವಿಧರರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಜರ್ಮನಿಯಲ್ಲಿ ಉದ್ಯೋಗದಲ್ಲಿ ಇದ್ದಾರೆ. ಪತ್ನಿ ಸ್ಮೀತಾ ಅವರು ಪತಿಯ ಕಂಪನಿಯಲ್ಲಿಯೇ ಉದ್ಯೋಗಿಯಾದ್ದಾರೆ. ದಂಪತಿಗಳಿಗೆ ಪುತ್ರಿ ಸಾಕ್ಷ್ಯ (15) ಹಾಗೂ ಪುತ್ರ ಶ್ಲೋಕ್‌ (10) ಇದ್ದಾರೆ. 13 ವರ್ಷಗಳ ಹಿಂದೆ ಕುಂದಾಪುರದ ಕುಂದೇಶ್ವರ ದೇವಸ್ಥಾನದ ಹಿಂದೆ ಮನೆಯನ್ನು ಕಟ್ಟಿಸಿದ್ದು, ಅಲ್ಲಿ ಪ್ರಶಾಂತ ಅವರ ತಾಯಿ ವಿನಯ ವಾಸಿಸುತ್ತಿದ್ದಾರೆ.

ವಿದೇಶಕ್ಕೆ ತೆರಳಲಿರುವ ಕುಟುಂಬ ಸದಸ್ಯರು ಆಕಸ್ಮಿಕವಾಗಿ ನಡೆದಿರುವ ದುರ್ಘಟನೆಯಿಂದ 2 ಕುಟುಂಬಗಳಲ್ಲಿ ದಿಗ್ಭ್ರಮೆ ಆವರಿಸಿದೆ. ಮುಂದೇನು ಮಾಡಬೇಕು ಎನ್ನುವುದಕ್ಕಾಗಿ ಕುಟುಂಬ ಸದಸ್ಯರು ತಮ್ಮ ಆಪ್ತರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಜರ್ಮನ್‌ ದೇಶದ ಕಾನೂನು ಕಟ್ಟಳೆಗಳಿಗೆ ಅನುಸಾರವಾಗಿ ತೀರ್ಮಾನ ಕೈಗೊಳ್ಳಬೇಕಾಗಿರುವುದರಿಂದ ರಾಯಭಾರ ಕಚೇರಿಯಿಂದ ಬರುವ ಸಂದೇಶಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ರಾಯಭಾರ ಕಚೇರಿಯಿಂದ ಸಂದೇಶ ಬಂದ ಬಳಿಕ ಜರ್ಮನಿಗೆ ಯಾರೆಲ್ಲ ತೆರಳಬೇಕು ಎನ್ನುವ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ಮೂಲದ ಪ್ರಕಾರ ಸ್ಮೀತಾ ಅವರ ತಂದೆ, ತಾಯಿ ಹಾಗೂ ಪ್ರಶಾಂತ ಅವರ ತಾಯಿ ತೆರಳುವ ಸಾಧ್ಯತೆಗಳಿವೆ.

ಚೂರಿ ಇರಿತದಿಂದ ಮ್ಯೂನಿಚ್‌ನಲ್ಲಿ ಮೃತಪಟ್ಟಿರುವ ಪ್ರಶಾಂತ, ಗಂಭೀರ ಸ್ಥಿತಿಯಲ್ಲಿರುವ ಸ್ಮಿತಾ ಬಸರೂರ ದಂಪತಿಯ ಮಕ್ಕಳನ್ನು ನೋಡಿಕೊಳ್ಳುವಂತೆ’ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭಾರತದ ರಾಯಭಾರಿ ಕಚೇರಿಗೆ ಸೂಚಿಸಿದ್ದಾರೆ.

‘ಇದೊಂದು ದುರದೃಷ್ಟಕರ ಘಟನೆ.ಪ್ರಶಾಂತ ಸಹೋದರ ಜರ್ಮಿನಿಗೆ ತೆರಳಲು ಎಲ್ಲ ನೆರವು ನೀಡಲಾಗಿದೆ. ಜರ್ಮನಿಯಲ್ಲಿರುವ ಭಾರತದ ಅಧಿಕಾರಿಗಳ ಕಾರ್ಯ ಪ್ರಶಂಸನೀಯ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT