ಕುಂದಾಪುರ: ಬೋನಿಗೆ ಬಿದ್ದ ಚಿರತೆ

ಶನಿವಾರ, ಏಪ್ರಿಲ್ 20, 2019
29 °C
ನಾಗರಿಕರಲ್ಲಿ ಆಂತಕ ಸೃಷ್ಟಿಸಿದ್ದ ಚಿರತೆ

ಕುಂದಾಪುರ: ಬೋನಿಗೆ ಬಿದ್ದ ಚಿರತೆ

Published:
Updated:
Prajavani

ಕುಂದಾಪುರ: ತಾಲ್ಲೂಕಿನ ಹೆಸ್ಕುತ್ತೂರು ಪರಿಸರದಲ್ಲಿ ಶುಕ್ರವಾರ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಸೆರೆಗೆ ಸಿಕ್ಕಿರುವ ಚಿರತೆ ಹಲವು ದಿನಗಳಿಂದ ಹೆಸ್ಕುತ್ತೂರು ಭಾಗದಲ್ಲಿ ಓಡಾಡುತ್ತಾ ನಾಗರಿಕರಲ್ಲಿ ಭಯ ಹುಟ್ಟಿಸಿತ್ತು. ಇಲ್ಲಿನ ಪೋಸ್ಟ್‌ ಮಾಸ್ಟರ್ ಶಂಕರ ಶೆಟ್ಟಿ ಅವರ ಹಟ್ಟಿಗೆ ಈಚೆಗೆ ನುಗ್ಗಿದ್ದ ಚಿರತೆ ಆತಂಕ ಸೃಷ್ಟಿಸಿತ್ತು. ಈ ಸಂಬಂಧ ಶಂಕರ ಶೆಟ್ಟಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ದಾಳಿ ವಿಚಾರ ತಿಳಿಸಿದ್ದರು.

ಅಧಿಕಾರಿಗಳು ಶಂಕರ ಶೆಟ್ಟಿ ಅವರ ಮನೆ ಸಮೀಪ ಬೋನಿಟ್ಟು ಅದರೊಳಗೆ ನಾಯಿಯನ್ನು ಕಟ್ಟಿಹಾಕಿದ್ದರು. ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಬಳಿಕ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಡಿಎಫ್‌ಒ ಪ್ರಭಾಕರನ್ ಹಾಗೂ ಎಸಿಪಿ ಲೋಹಿತ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕರಾದ ವಿ.ಮಂಜು, ಶಂಕರ್, ಉದಯ್, ಅರಣ್ಯ ವೀಕ್ಷಕರಾದ ಸೋಮಶೇಖರ್, ವೆಂಕಟೇಶ್, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !