ಕುಂದಾಪುರ: ‘ಸಂಘಟನೆ, ಸಂಘಟಿತ ಹೋರಾಟದ ಮೂಲಕ ನ್ಯಾಯ ಪಡೆಯಲು ಸಾಧ್ಯವಿದೆ ಎಂಬುದನ್ನು ಪ್ರತಿಪಾದಿಸಿದವರು ಅಂಬೇಡ್ಕರ್’ ಎಂದು ಉಡುಪಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಹೇಳಿದರು.

ಕರ್ನಾಟಕ ಭೀಮ ಘರ್ಜನೆ ಅಧ್ಯಯನ ಮತ್ತು ತರಬೇತಿ ಟ್ರಸ್ಟ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಜಿಲ್ಲಾ ಸಮಿತಿ ಆಶ್ರಯಲ್ಲಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಮಾತನಾಡಿದರು. ಸಂಘಟನೆಯ ಉಡುಪಿ ಜಿಲ್ಲಾ ಸಂಚಾಲಕ ಮಂಜುನಾಥ ಗುಡ್ಡೆಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಉಪ ವಿಭಾಗದ ಸಹಾಯ ಆಯುಕ್ತೆ ರಶ್ಮಿ ಎಸ್.ಆರ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿದರು.

ನಗರ ಠಾಣೆಯ ಎಸ್ಐ ನಂಜಾ ನಾಯ್ಕ್ ಜಾಥಾಕ್ಕೆ ಚಾಲನೆ ನೀಡಿದರು. ಉದ್ಯಮಿ ಗುರುಪ್ರಸಾದ್ ಶಿರೂರು ಮಂದಾರ್ತಿ ಬಹುಮಾನ ವಿತರಿಸಿದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ, ಪ್ರಮುಖರಾದ ಪ್ರಭಾಕರ ವಿ, ಚಂದ್ರಮಾ ತಲ್ಲೂರು, ಶಶಿಧರ ಕೋಟಿ ನಂದಿಬೆಟ್ಟು, ಚಂದ್ರ ಅಲ್ತಾರು, ಸತೀಶ ಮೂಡಬಿದಿರೆ, ರಾಘು ಶಿರೂರು, ಶಶಿ ಬಳ್ಕೂರು, ವಿಠಲ ಸಾಲಿಕೇರಿ, ಸುಧಾಕರ ಸುರ್ಗೋಳಿ, ನಾಗರಾಜ ಉಪ್ಪಿನಕುದ್ರು ಭಾಗವಹಿಸಿದ್ದರು.

ಸನ್ಮಾನ: ಸತೀಶ ಸುರ್ಗೋಳಿ, ಅಮಿತ್ ಗುಡ್ಡೆಯಂಗಡಿ, ಭೋಜರಾಜ ಕಾವ್ರಾಡಿ, ದುರ್ಗಿ ನಕ್ರೆ ಕಾರ್ಕಳ, ಬಾಲಕೃಷ್ಣ ಕೋಟೆಬಾಗಿಲು ತಲ್ಲೂರು ಅವರನ್ನು ಗೌರವಿಸಲಾಯಿತು. ಜೀತಮುಕ್ತ ನಾಗಣ್ಣ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 6ನೇ ರ್ಯಾಂಕ್ ಗಳಿಸಿದ ಶ್ರಾವ್ಯ ಕೋಟೆಬಾಗಿಲು ಅವರನ್ನು ಸನ್ಮಾನಿಸಲಾಯಿತು.

ಆಯುಷ್ಮಾನ್ ಶಂಭು ಸುವರ್ಣ ಬುದ್ಧ ವಂದನೆ ನಡೆಸಿಕೊಟ್ಟರು. ಗೌತಮ್ ತಲ್ಲೂರು ಸಂವಿಧಾನ ಪೀಠಿಕೆ ಓದಿದರು. ಸುಮಲತಾ ಬಜಗೋಳಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-28-150095118

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.