ಕುಂದಾಪುರ: ‘ಜಾತ್ಯತೀತ ಸಮಾಜ ಕಟ್ಟಲು ಮುಂದಾದ ದಾರ್ಶನಿಕರ ಹೆಸರಲ್ಲೇ ಜಾತಿ ಸೃಷ್ಟಿಯಾಗುತ್ತಿರುವುದು ವ್ಯವಸ್ಥೆಯ ದುರಂತ’ ಎಂದು ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಜಿಲ್ಲಾ ಹಾಗೂ ತಾಲ್ಲೂಕು ಮುಸ್ಲಿಂ ಒಕ್ಕೂಟದ ಆಶ್ರಯದಲ್ಲಿ ಹಂಗಳೂರಿನಲ್ಲಿ ಆಯೋಜಿಸಿದ್ದ ಈದ್ ಸೌಹಾರ್ದ ಸಮ್ಮಿಲನದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಮಾಧ್ಯಮಗಳ ದುರ್ಬಳಕೆಗೆ ಪ್ರಚೋದನೆ ತೋರಿದವರಿಗೆ ಅದೇ ತಿರುಗುಬಾಣವಾಗುತ್ತಿದೆ. ಕಷ್ಟದಲ್ಲಿ ಇದ್ದವರಿಗೆ ನೆರವಾಗುವುದೇ ದೊಡ್ಡ ಧರ್ಮ ಕಾರ್ಯ. ದೇಹ ಅಂಗಾಂಗ ದಾನದ ಚಿಂತನೆಗಳು ಹೆಚ್ಚಾಗಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಬಾಳ್ವೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಪ್ರೊ. ಫಣಿರಾಜ್, ‘ಎಲ್ಲಾ ಜಾತಿ– ಮತಗಳಲ್ಲಿ ಒಳ್ಳೆಯವರು– ಕೆಟ್ಟವರು ಇರುತ್ತಾರೆ. ಸಮಾಜವನ್ನು ಕಟ್ಟುವ ಸೌಹಾರ್ದ ಕಾರ್ಯದಲ್ಲಿ ಎಲ್ಲರೂ ಜೊತೆಯಾಗಬೇಕು’ ಎಂದರು.

ಚಿಂತಕ, ಸಾಮಾಜಿಕ ಕಾರ್ಯಕರ್ತ ಅಕ್ಬರ್ ಅಲಿ ಉಡುಪಿ ಮಾತನಾಡಿ, ‘ಕುರಾನ್, ಧರ್ಮ, ಪ್ರವಾದಿ ಒಂದು ಸಮುದಾಯಕ್ಕೆ ಸೀಮಿತವಲ್ಲ. ದೇವರನ್ನು– ಭಕ್ತರನ್ನು ಜೋಡಿಸುವ ಕೆಲಸವನ್ನು ಧರ್ಮಗ್ರಂಥಗಳು ಮಾಡುತ್ತವೆ. ಯಾವುದೇ ಧರ್ಮ ಸಂಘರ್ಷ, ಒಡೆಯುವುದನ್ನು ಕಲಿಸುವುದಿಲ್ಲ. ಧರ್ಮದ ಆಚರಣೆ ಎಂದರೆ ಸಹಬಾಳ್ವೆ’ ಎಂದು ಹೇಳಿದರು.

ಪತ್ರಕರ್ತ ಜಾನ್ ಡಿಸೋಜ ಮಾತನಾಡಿದರು. ಮುಸ್ಲಿಂ ಒಕ್ಕೂಟ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದಸ್ತಗಿರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊಹಮ್ಮದ್ ರಫೀಕ್ ಬಿಎಸ್ಎಫ್, ಜಿಲ್ಲಾ ಘಟಕದ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಸಹಬಾಳ್ವೆ ಸಂಘಟನೆಯ ಕುಂದಾಪುರ ಘಟಕದ ಅಧ್ಯಕ್ಷ ರಾಮಕೃಷ್ಣ ಹೇರ್ಳೆ, ರೋಮನ್ ಕಥೋಲಿಕ್ ವಲಯ ಧರ್ಮಗುರು ಪೌಲ್ ರೇಗೊ ಭಾಗವಹಿಸಿದ್ದರು.

ಕಾರ್ಯಕ್ರಮ ಸಂಚಾಲಕ ಝಮೀರ್ ಅಹ್ಮದ್ ರಶಾದಿ ದುವಾ ಪಠಣ ಮಾಡಿದರು. ಮುಸ್ಲಿಂ ಒಕ್ಕೂಟ ಜಿಲ್ಲಾ ಘಕಟದ ಅಧ್ಯಕ್ಷ ಮುಹಮ್ಮದ್ ಮೌಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಕಾರ್ಯದರ್ಶಿ ರಿಯಾಝ್ ಕೋಡಿ ಸ್ವಾಗತಿಸಿದರು. ಎಸ್. ಮುನೀರ್ ಕಂಡ್ಲೂರು ನಿರೂಪಿಸಿದರು. ಪುರಸಭೆ ಮಾಜಿ ಸದಸ್ಯ ಅಬ್ಬು ಮಹಮ್ಮದ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-28-1439507162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.