ಕುಂದಾಪುರ: ನಗರದ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಜಾಗ ಸರ್ವೆ ನಂಬರ್ 141: 1ಸಿ 1ಎ ಪ್ರದೇಶದ ಸರ್ಕಾರಿ ಜಾಗವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಿರುವ ಸರ್ಕಾರದ ತೀರ್ಮಾನ ಖಂಡನೀಯ ಎಂದು ಸಿಪಿಎಂ ಮುಖಂಡರು ಹೇಳಿದ್ದಾರೆ.

ಈ ಸಂಬಂಧ ಅವರು ಉಪ ವಿಭಾಗಾಧಿಕಾರಿ ಎಸ್.ಆರ್.ರಶ್ಮಿ ಅವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಈ ಜಾಗ ಗೂಡ್ಸ್ ಟೆಂಪೊ ನಿಲ್ದಾಣವಾಗಿ ಬಳಕೆ ಆಗುತ್ತಿದೆ. ಹಿಂದೆಯೂ ಈ ಜಾಗವನ್ನು ಬೇರೆ ರಾಜಕೀಯ ಪಕ್ಷಗಳಿಗೆ ನೀಡುವ ಪ್ರಸ್ತಾವ ಇತ್ತು. ಆಗಲೂ ಆಕ್ಷೇಪ ವ್ಯಕ್ತವಾಗಿತ್ತು. ಪರಿಶೀಲನೆ ನಡೆಸಿದ್ದ ಕಂದಾಯ ನಿರೀಕ್ಷಕರು, ಈ ಪ್ರದೇಶವು ಪೊರಂಬೋಕು ರಸ್ತೆ ತೋಡು ಆಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಮಂಜೂರಾತಿಗೆ ಅವಕಾಶ ಇಲ್ಲ ಎಂಬುದಾಗಿ ವರದಿ ನೀಡಿದ್ದರು.

ಈ ಜಾಗವನ್ನು ಸರಕು ಸಾಗಣೆಯ ಆಟೊ ನಿಲ್ದಾಣವಾಗಿ ಗುರುತಿಸಲು 2000ನೇ ಇಸವಿಯಲ್ಲಿ ಪುರಸಭೆ, ಜಿಲ್ಲಾಧಿಕಾರಿ ಒಪ್ಪಿಗೆಗೆ ಪ್ರಸ್ತಾವ ಸಲ್ಲಿಸಿತ್ತು. ಸಾರ್ವಜನಿಕ ಉಪಯೋಗಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಸ್ಥಳ ಇಲ್ಲದಿರುವಾಗ ಇರುವ ಈ ಜಾಗವನ್ನು ರಾಜಕೀಯ ಪಕ್ಷದ ಕಚೇರಿಗೆ ನೀಡುವುದಕ್ಕೆ ನಮ್ಮ ಆಕ್ಷೇಪವಿದೆ. 2000ನೇ ಇಸವಿಯ ಪುರಸಭೆ ತೀರ್ಮಾನದಂತೆ ಈ ಸ್ಥಳವನ್ನು ಗೂಡ್ಸ್ ಆಟೊ, ಟೆಂಟೊ ನಿಲ್ದಾಣಕ್ಕೆ ಕಾಯ್ದಿರಿಸಬೇಕು. ಉಪ ವಿಭಾಗಾಧಿಕಾರಿ, ಈ ತೀರ್ಮಾನವನ್ನು ಮರು ಪರಿಶೀಲಿಸಿ ಸ್ಥಳವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಿಪಿಎಂ ಮುಖಂಡರಾದ ವಿ.ನರಸಿಂಹ, ಸುರೇಶ್ ಕಲ್ಲಾಗರ, ಎಚ್.ನರಸಿಂಹ, ವಿ.ಚಂದ್ರಶೇಖರ್, ಆಟೊ ಸಂಘದ ಮುಖಂಡ ರಾಜು ದೇವಾಡಿಗ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-28-588390306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.