ಕುಂದಾಪುರ: ತಾಲ್ಲೂಕಿನ ಗುಜ್ಜಾಡಿಯ ನಾಯಕವಾಡಿಯ ಬಿಲ್ಲವರ ಸಮಾಜ ಸೇವಾ ಸಂಘದ ಶ್ರೀ ರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ ಏ.5ರವರೆಗೆ ಸೀತಾರಾಮಚಂದ್ರ ಕಲ್ಯಾಣೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತ್ರಾಸಿ ಶ್ರೀ ರಾಮ ಮಂದಿರದಿಂದ ಹೊರಕಾಣಿಕೆ ಮೆರವಣಿಗೆ ನಡೆದಿದ್ದು ಏ.3ರಂದು ಸಂಜೆ 4ಕ್ಕೆ ಕುಣಿತ ಭಜನೆ ಸ್ಪರ್ಧೆ, ಏ.2

ರಿಂದ 5ರವರೆಗೆ ಸೀತಾರಾಮಚಂದ್ರ ಕಲ್ಯಾಣೋತ್ಸವ ಸಂಜೆ 7.30ಕ್ಕೆ ಧಾರ್ಮಿಕ ಸಭೆ, 4ರಂದು ಸಂಜೆ 6ರಿಂದ ಸಾಂಸ್ಕೃತಿಕ ವೈವಿಧ್ಯ, ಸಂಜೆ 7.30ರಿಂದ ಧಾರ್ಮಿಕ ಸಭೆ, ಬಳಿಕ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಏ.5ರ ಮಧ್ಯಾಹ್ನ 2.30ಕ್ಕೆ ಮರವಂತೆಯ ಮಾರಸ್ವಾಮಿ ದೇಗುಲದಿಂದ ಶ್ರೀ ರಾಮ ದೇವರ ಪುರಮೆರವಣಿಗೆ, ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘದಿಂದ ಸೀತಾ ದೇವಿಯ ಪುರಮೆರವಣಿಗೆ ನಡೆಯಲಿದೆ. ಕನ್ಯಾಡಿಯ ಶ್ರೀರಾಮ ಕ್ಷೇತ್ರ, ಗುರುದೇವ ಮಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕನ್ಯಾಡಿ ಕ್ಷೇತ್ರದ ಆಗಮ ಪ್ರವೀಣ ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ಅವರ ಪೌರೋಹಿತ್ಯದಲ್ಲಿ ಸೀತಾ ರಾಮಚಂದ್ರ ಕಲ್ಯಾಣೋತ್ಸವ ನಡೆಯಲಿದೆ. ಸಂಜೆ ಧಾರ್ಮಿಕ ಸಭೆ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಪ್ರಕಾಶ್ ಪೂಜಾರಿ ಮಾತನಾಡಿ, 49 ವರ್ಷಗಳ ಹಿಂದೆ ತೆಂಗಿನ ಗರಿಯ ಚಪ್ಪರದಡಿ ಶ್ರೀ ರಾಮ ದೇವರಿಗೆ ಪೂಜೆ ನಡೆಯುತ್ತಿತ್ತು. 25 ವರ್ಷಗಳಿಂದ ನಿತ್ಯ ಭಜನೆ, ರಾಮ ನವಮಿ ವೇಳೆ ಮನೆ ಮನೆ ಭಜನೆ, ಎರಡೂವರೆ ದಶಕದ ಹಿಂದೆ ಸುಸಜ್ಜಿತ ಶ್ರೀ ರಾಮ ಮಂದಿರ ನಿರ್ಮಾಣ, ಈಗ ಶ್ರೀ ರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.

ಗುಜ್ಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಪ್ರಮುಖರಾದ ಶೇಖರ್ ಪೂಜಾರಿ, ರಾಜು ಪೂಜಾರಿ, ಪ್ರದೀಪ್ ಪೂಜಾರಿ, ಉದಯ ಪೂಜಾರಿ, ರಾಘವೇಂದ್ರ ಪೂಜಾರಿ, ಶಂಕರ ಪೂಜಾರಿ, ಸುರೇಶ್ ಪೂಜಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-28-887603496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.