ಕುಂದಾಪುರ: ಜೆಡಿಎಸ್ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಪ್ರಯುಕ್ತ ಇಲ್ಲಿನ ನೆಹರೂ ಮೈದಾನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಮಿತಿ ವತಿಯಿಂದ ಜೆಡಿಎಸ್ ರಜತ ಮಹೋತ್ಸವ ಸಂಭ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆಯ ಮಾಜಿ ಸಭಾಪತಿ ಕೃಷ್ಣ ರೆಡ್ಡಿ, 25 ವರ್ಷಗಳಲ್ಲಿ ಜೆಡಿಎಸ್ ನಡೆದುಬಂದ ಹಾದಿ, ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳ ಕುರಿತು ಮಾತನಾಡಿ, ಜೆಡಿಎಸ್ ಅಧಿಕಾರಾವಧಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ವಿವರಿಸಿದರು.

ವಕೀಲ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ಸಂಯಮ, ತಾಳ್ಮೆ ಹಾಗೂ ರಾಜಕೀಯ ಅನುಭವ ಇರುವ ಎಚ್.ಡಿ.ದೇವೇಗೌಡರು ತಮ್ಮ ಅಧಿಕಾರದಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿರುವ ಜನಪರ ಯೋಜನೆ ಹಾಗೂ ಕೊಡುಗೆಗಳು ಮಹತ್ವದ್ದು. ಭೀಷ್ಮನಂತೆ ಅಜಾತ ಶತ್ರುತ್ವ ಹಾಗೂ ಅರ್ಜುನನಂತಹ ಜಾಣ್ಮೆ ಅವರನ್ನು ರಾಷ್ಟ್ರ ನಾಯಕನನ್ನಾಗಿಸಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಗುಣ ಪಕ್ಷಕ್ಕೆ ಗಟ್ಟಿ ತಳಪಾಯ ನೀಡಿದೆ ಎಂದರು.

ಉಡುಪಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಜಿಲ್ಲಾ ಉಸ್ತುವಾರಿ ಸೂರಜ್ ನಾಯ್ಕ ಸೋನಿ ಕುಮಟಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಪಕ್ಷದ ಪ್ರಮುಖರಾದ ವಾಸುದೇವ್ ರಾವ್, ಸುಧಾಕರ್ ಶೆಟ್ಟಿ ಕೀರ್ತಿರಾಜ್, ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ಶ್ರೀಕಾಂತ ಕಚೂರು, ಪ್ರಕಾಶ ಶೆಟ್ಟಿ, ಶ್ರೀಕಾಂತ ಅಡಿಗ ಕೊಲ್ಲೂರು, ಸಂದೇಶ ಭಟ್ ಉಪ್ಪುಂದ, ರಾಘವೇಂದ್ರ ಉಳ್ಳೂರು, ಅಶ್ರಫ್, ವೆಂಕಟೇಶ್, ಜಯ ಪೂಜಾರಿ, ಜೆಪ್ಪು ಯೋಗೀಶ್ ಶೆಟ್ಟಿ, ಧರ್ಮೇಂದ್ರ ಪೂಜಾರಿ, ಮಂಜುನಾಥ್ ಇದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕುಂದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ ಸ್ವಾಗತಿಸಿ, ವಂದಿಸಿದರು. ದೀಪಿಕಾ ನಿರೂಪಿಸಿದರು. 150 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಸಾಧಕರನ್ನು ಗೌರವಿಸಲಾಯಿತು. ಅಂಗವಿಕಲರಿಗೆ ವಾಕಿಂಗ್ ಸ್ಟ್ಯಾಂಡ್ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-28-62610132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.