ಕುಂದಾಪುರ: ನಾಡ ಪಶು ಚಿಕಿತ್ಸಾಲಯದಿಂದ ನಿವೃತ್ತರಾದ ಕೃಷ್ಣ ಅವರಿಗೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಬೀಳ್ಕೊಡುಗೆ ಈಚೆಗೆ ನಡೆಯಿತು.

ಸನ್ಮಾನ ನೆರವೇರಿಸಿದ ಬೈಂದೂರು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೈ.ಕೆ ಅರುಣ್ಕುಮಾರ್ ಮಾತನಾಡಿ 1994ರಲ್ಲಿ ಗುಜ್ಜಾಡಿ ಪಶು ಚಿಕಿತ್ಸಾಲಯದಲ್ಲಿ ವೃತ್ತಿಜೀವನ ಆರಂಭಿಸಿದ ಕೃಷ್ಣ ಅನಂತರ ಹೆಮ್ಮಾಡಿ, ಬೈಂದೂರು ಹಾಗೂ ನಾಡಪಶು ಚಿಕಿತ್ಸಾಲಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 32 ವರ್ಷಗಳ ಸೇವಾ ಅವಧಿಯಲ್ಲಿ ಜನಮೆಚ್ಚುಗೆ ಗಳಿಸಿದ್ದಾರೆ ಎಂದರು.

ಪಡುಕೋಣೆ ಯುವಜನ ಸಂಘಟನೆ ಮೂಲಕ ಜನಪರ ಕಾರ್ಯಕ್ರಮ, ಸಾಕ್ಷರತಾ ಆಂದೋಲನ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣ ದಂಪತಿಯನ್ನು ಇಲಾಖೆಯವರು, ಗ್ರಾಮಸ್ಥರು ಹಾಗೂ ಹೈನುಗಾರರು ಸನ್ಮಾನಿಸಿದರು.

ನಾಡ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ನಾಗೇಶ್, ಪಿಡಿಒ ಹರೀಶ್, ಹೆಮ್ಮಾಡಿ ಪಶು ಚಿಕಿತ್ಸಾಲಯದ ವೈದ್ಯ ಡಾ.ನಾಗರಾಜ, ಗುಜ್ಜಾಡಿ ಪಶುಚಿಕಿತ್ಸಾಲಯದ ವೈದ್ಯ ಡಾ.ಅರುಣ್ ಕುಮಾರ್, ಸಹಾಯಕ ರಾಘವೇಂದ್ರ ಪಾಲ್ಗೊಂಡಿದ್ದರು. ನಾಡ ಪಶು ಚಿಕಿತ್ಸಾಲಯದ ವೈದ್ಯ ಡಾ.ಹರೀಶ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-28-1436576811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.