ಕುಂದಾಪುರ: ಇಲ್ಲಿನ ಹಳೆ ತಹಶೀಲ್ದಾರ್ ಕಚೇರಿಯ ಕಟ್ಟಡದ ಚಾವಣಿ ದುರವಸ್ಥೆಯಲ್ಲಿದೆ. ದುರಸ್ತಿ ಮಾಡಬೇಕಾದ ಕಂದಾಯ ಇಲಾಖೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು ಬೇಜವಾಬ್ದಾರಿತನ ಎಂದು ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ದೂರಿದ್ದಾರೆ.

ಮಿನಿ ವಿಧಾನಸೌಧಕ್ಕೆ ಹೆಚ್ಚಿನ ಕಚೇರಿಗಳು ಸ್ಥಳಾಂತರಗೊಂಡಿದ್ದರೂ ಕಂದಾಯ ನಿರೀಕ್ಷಕರ ಕಚೇರಿ, ಸರ್ವೆ ಇಲಾಖೆ, ಭೂನ್ಯಾಯ ಮಂಡಳಿ ಕಚೇರಿ ಮತ್ತು ದಾಖಲೆಗಳು ಹಳೆಯ ಕಟ್ಟಡದಲ್ಲೇ ಇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಬೆಂಕಿ ತಗುಲಿ ಮಹತ್ವದ ದಾಖಲೆಗಳು ಸುಟ್ಟು ಹೋಗಿರುವ ಘಟನೆ ಕಣ್ಣೇದುರೇ ಇದೆ. ಹೀಗಿರುವಾಗ ಕಟ್ಟಡವನ್ನು ದುರಸ್ತಿ ಮಾಡದೆ ಇರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಮಳೆಗಾಲ ಆರಂಭಕ್ಕೆ ಕೆಲವೇ ದಿನ ಇದ್ದು ಒಡೆದು ಹೋದ ಹೆಂಚು, ಹಾಳಾದ ಪಕ್ಕಾಸು, ರೀಪು ಇತ್ಯಾದಿಗಳನ್ನು ಬದಲಾಯಿಸಿ ಕಟ್ಟಡವನ್ನು ಉಳಿಸಲು ಸಿದ್ದರಾಗಬೇಕಾದವರು ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-28-1510278568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.