ಕುಂದಾಪುರ: ‘ಕಟ್ಟು ಕಥೆಗಳನ್ನು ಕಟ್ಟಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿವೆ’ ಎಂದು ಮುಖಂಡ ಕಿಮ್ಮನೆ ರತ್ನಾಕರ್ ಹೇಳಿದರು.

ಹಂಗಳೂರಿನ ಯುನಿಟಿ ಹಾಲ್ನಲ್ಲಿ ಸಹಬಾಳ್ವೆ ಕುಂದಾಪುರ ಆಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬಹುತೇಕ ರಾಜ, ಮಹಾರಾಜರು ಬೇರೆಯವರನ್ನು ತುಳಿದೇ ಅಧಿಕಾರಕ್ಕೆ ಬಂದವರು. 50 ವರ್ಷದ ಜೀವಿತಾವಧಿಯಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ನೀಡಿದಷ್ಟು ತಾಪತ್ರಯಗಳನ್ನು ಭಾರತದಲ್ಲಿ ಬೇರೆಯವರು ನೀಡಿಲ್ಲ. ಟಿಪ್ಪು ಜಾತಿ, ಧರ್ಮದ ದ್ವೇಷಿಯಾಗಿರಲಿಲ್ಲ ಎಂದರು.

ದಕ್ಷಿಣ ಕನ್ನಡದ ಸಾಮಾಜಿಕ ಸ್ಥಿತಿಗತಿ ಬಗ್ಗೆ ದುಃಖ ಇದೆ. ಇಲ್ಲಿ ಸಾಮರಸ್ಯ ಹೆಚ್ಚಾಗಬೇಕು ಎನ್ನುವ ಕಾಳಜಿ ಇದೆ. ಸುಪಾರಿ ಹಂತಕರಿಗಿಂತ ಕೋಮುವಾದಿ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು. ಮಾನವೀಯತೆ ಮೇಲೆ ಸಮಾಜ ಕಟ್ಟಬೇಕು. ವಾಟ್ಸ್ಆ್ಯಪ್ ಯುನಿವರ್ಸಿಟಿಯ ಪ್ರಭಾವ ವಿದ್ಯಾವಂತರನ್ನು ಬಿಟ್ಟಿಲ್ಲ. ಸಾಮರಸ್ಯ ಕೆಡಿಸುವ ಘಟನೆಗಳು ಆಕಸ್ಮಿಕವಲ್ಲ, ಹೆಚ್ಚಿನವು ಯೋಜಿತ ರೀತಿಯದ್ದು. ವ್ಯಕ್ತಿ, ಸಿದ್ಧಾಂತಗಳನ್ನು ವಿಮರ್ಶೆ ಮಾಡದೆ ಒಪ್ಪಬಾರದು ಎಂದರು.

ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಮಾಜಕ್ಕೆ ನೈಜ ಇತಿಹಾಸ ತಿಳಿಸುವ ಕೆಲಸವಾಗಬೇಕು. ಬೇರೆಯವರು ಹೇಳಿದ ಸುಳ್ಳು ಸಂಗತಿಗಳೇ ಸತ್ಯವಾಗುತ್ತಿವೆ. ಅವಕಾಶವಾದಿಗಳು ಚರಿತ್ರೆಯಲ್ಲಿಲ್ಲದ ಉರಿ ಗೌಡ, ನಂಜೇ ಗೌಡರನ್ನು ತಂದು ಗುರಿ ಸಾಧನೆ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಪುಸ್ತಕ ಓದುವ ಹವ್ಯಾಸ ಹೆಚ್ಚಾಗಬೇಕು. ಓದಿದ ಪುಸ್ತಕದ ಬಗ್ಗೆ ಚರ್ಚೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕೃತಿ ಪರಿಚಯ ಮಾಡಿದ ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಬಹದ್ದೂರ್ ಟಿಪ್ಪು ಸುಲ್ತಾನ್ ಸಾವಿನ ದಿನಗಳಲ್ಲಿ ನಾಗರಿಕ ಟಿಪ್ಪು ಆಗಿ ಗುರುತಿಸಿಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಪರವಾದ ನಿಲುವು ತೋರುತ್ತಾರೆ. ಇದಕ್ಕೆಲ್ಲ ಕರಾವಳಿ ಅವರಿಗೆ ಆಡುಂಬೊಲವಾಗಿತ್ತು. ಈ ಭಾಗದ ಸಣ್ಣ ರಾಜರೊಂದಿಗೊ ಅವರ ಸಂಬಂಧ ಗೌರವಯುತ, ಸೌಹಾರ್ದಯುತವಾಗಿತ್ತು. ಟಿಪ್ಪು ಕೋಮುವಾದಿ ಆಗಿರಲಿಲ್ಲ. ಶ್ರೀಕೃಷ್ಣನ ಚಿತ್ರ ಇರುವ ನಾಣ್ಯ ಮುದ್ರಿಸಿದ ಏಕೈಕ ರಾಜ ಅವರು. ಶಂಕರಾಚಾರ್ಯರ ಮಠಗಳೊಂದಿಗೂ ಧಾರ್ಮಿಕ ಸಹಿಷ್ಣುತೆ ಹೊಂದಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಪ್ಪು ಯಾವುದೇ ಚರ್ಚ್ಗಳನ್ನು ಧ್ವಂಸಗೊಳಿಸಿಲ್ಲ. ಬ್ರಿಟೀಷರ ಇರುವಿಕೆಯ ಬಗ್ಗೆ ಪರಿಶೀಲನೆಗಾಗಿ ಚರ್ಚ್ಗಳಿಗೆ ಅವರ ಸೈನ್ಯ ಹೋಗಿತ್ತು ಎಂದರು.

ಸಹಬಾಳ್ವೆ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷ ರಾಮಕೃಷ್ಣ ಹೇರ್ಳೆ ಎ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಫಣಿರಾಜ್, ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದಸ್ತಗಿರಿ ಕಂಡ್ಲೂರು ಭಾಗವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ನಿರೂಪಿಸಿದರು. ಆಶಾ ಕರ್ವೆಲ್ಲೊ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-28-1139323845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.