ಕುಂದಾಪುರ: ಇಲ್ಲಿನ ಪರಿಸರದ ಬಡರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆ ಒದಗಿಸುವ ಕಥೋಲಿಕ್ ಸಭಾದ ಸೇವಾ ಯೋಜನೆಗೆ ನಗರದ ವಿನಯ್ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಶ್ವನಾಥ ಶೆಟ್ಟಿ ಚಾಲನೆ ನೀಡಿದರು.

ಕಥೋಲಿಕ್ ಸಭಾ ಕೇಂದ್ರೀಯ ಡಯಾಲಿಸಿಸ್ ಸೇವಾ ಸಮಿತಿಯ ಸಂಚಾಲಕ ವಾಲ್ಟರ್ ಸಿರಿಲ್ ಪಿಂಟೊ ಮಾತನಾಡಿ, ಟ್ರಿನಿಟಿ ಮೆಡಿಕೇರ್ ಸರ್ವಿಸ್ನವರು ನೀಡುವ ಅನುದಾನದಲ್ಲಿ, ಜಿಲ್ಲೆಯಾದ್ಯಂತ ಬಡರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿ ಸೇವೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಉಡುಪಿ ಲೋಂಬಾರ್ಡ್ ಮತ್ತು ಎ.ವಿ ಬಾಳಿಗ ಆಸ್ಪತ್ರೆಗಳು, ಬ್ರಹ್ಮಾವರದ ಮಹೇಶ್ ಮತ್ತು ರೋಟರಿ ಬ್ರಹ್ಮಾವರ ಸುವರ್ಣ ಮಹೋತ್ಸವ ಡಯಾಲಿಸಿಸ್ ಕೇಂದ್ರ, ಕಮಲ್ ಬಾಳಿಗ ಆಸ್ಪತ್ರೆ, ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರ, ಮೂಡುಬಿದಿರೆ ಅಲಂಗಾರಿನ ಮೌಂಟ್ ರೋಸರಿ ಆಸ್ಪತ್ರೆಗಳೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 60ಕ್ಕೂ ಅಧಿಕ ರೋಗಿಗಳು ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಡಯಾಲಿಸಿಸ್ಗಾಗಿ ಬರುವ ಅರ್ಜಿಗಳನ್ನು ಪರಿಶೀಲಿಸಿ, ನೀಡುವ ಗುರುತು ಕಾರ್ಡ್ಗಳಿಗೆ ಈ ಡಯಾಲಿಸ್ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯುತ್ತದೆ. ಈ ಸೇವೆಯನ್ನು ಶೀಘ್ರ ಕಾರ್ಕಳಕ್ಕೆ ವಿಸ್ತರಿಸಲಾಗುವುದು. ಯೋಜನೆಗಾಗಿ ಪ್ರತಿ ತಿಂಗಳು, ₹3 ಲಕ್ಷ ಅನುದಾನ ನೀಡುತ್ತಿರುವ ಟ್ರನಿಟಿ ಮೆಡಿಕೇರ್ ಸರ್ವಿಸಸ್ನ ಜೋಸೆಫ್ ಮಿನೇಜಸ್, ಫ್ರೀಡಾ ರೇಗೊ ಮತ್ತು ಬೇಸಿಲ್ ಪಿಂಟೊ ಅವರಿಗೆ ಉಡುಪಿ ಪ್ರದೇಶ್ ಕಥೋಲಿಕ್ ಸಭಾ ಋಣಿಯಾಗಿದೆ ಎಂದು ಅವರು ಹೇಳಿದರು.

ಕಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷ ರೊನಾಲ್ಡ್ ಅಲ್ಮೆಡಾ ನೇತೃತ್ವದಲ್ಲಿ ಈ ವ್ಯವಸ್ಥೆಗೆ ನವೆಂಬರ್ ತಿಂಗಳಲ್ಲಿ ಕಲ್ಯಾಣಪುರದಲ್ಲಿ ಚಾಲನೆ ನೀಡಲಾಗಿತ್ತು.

ಕಥೋಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷೆ ಶೈಲಾ ಅಲ್ಮೆಡಾ, ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ಟೊ, ನಿಕಟಪೂರ್ವ ಅಧ್ಯಕ್ಷರಾದ ರೆಮಿ ಫರ್ನಾಂಡಿಸ್, ನಿಯೋಜಿತ ಅಧ್ಯಕ್ಷ ಅಲೆಕ್ಸಾಂಡರ್ ಲುವಿಸ್, ಕೋಶಾಧಿಕಾರಿ ರೀಟಾ ಕ್ವಾಡ್ರಸ್, ಉಪಾಧ್ಯಕ್ಷ ಜಾನ್ ಅಲ್ಮೆಡಾ, ಕಾರ್ಯದರ್ಶಿ ಮರಿಯ ಡಿಸಿಲ್ವ, ಸ್ತ್ರೀ ಪ್ರತಿನಿಧಿ ಸಂಚಾಲಕಿ ಆಶಾ ಕರ್ವಾಲೋ, ರಾಜಕೀಯ ಸಂಚಾಲಕ ರೋಷನ್ ಬರೆಟ್ಟೊ, ಡಯಾಲಿಸಿಸ್ ವಿಭಾಗದ ಅಧಿಕಾರಿ ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-28-1302458342

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.