ಕುಂದಾಪುರ: ಮಳೆಗಾಲ ಸಮೀಪಿಸುತ್ತಿದ್ದರೂ ವಿದ್ಯುತ್ ಕಂಬ, ತಂತಿಗಳಿಗೆ ಅಡ್ಡಲಾಗಿ ಬೆಳೆದಿರುವ ಮರಗಳ ಕೊಂಬೆಗಳ ತೆರವು ಕಾರ್ಯ ಅರಣ್ಯ ಇಲಾಖೆಯವರ ಸಮನ್ವಯದ ಕೊರತೆಯಿಂದ ಆಗುತ್ತಿಲ್ಲ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕುಂದಾಪುರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಪಾ ಯಕಾರಿ ಮರಗಳ ಕೊಂಬೆ ಕಡಿಯದೇ ಇದ್ದರೆ ಮಳೆಗಾಲದಲ್ಲಿ ಸಮಸ್ಯೆಯಾಗಲಿದೆ ಎಂದರು.

ಸದಸ್ಯರಾದ ಮಂಜು ಕೊಠಾರಿ, ಚಂದ್ರ ಕಾಂಚನ್, ವಾಣಿ ಆರ್ ಶೆಟ್ಟಿ ಮಾತನಾಡಿ ಅಪಾಯಕಾರಿ ಮರಗಳ ಕೊಂಬೆ ಕಡಿಯದಿದ್ದರೆ ಮೆಸ್ಕಾಂಗೇ ನಷ್ಟ ಆಗಲಿದೆ ಎಂದರು.

ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಅಪಾಯಕಾರಿ ಮರಗಳ ಪಟ್ಟಿ ಮಾಡಿ ಅರಣ್ಯ ಇಲಾಖೆಯ ಅನುಮತಿಗಾಗಿ ಕಳುಹಿಸಲಾಗಿದೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಗ್ಯಾರಂಟಿ ಯೋಜನೆಯಡಿ ತಾಲ್ಲೂಕಿಗೆ ಈವರೆಗೆ ₹575 ಕೋಟಿ ದೊರಕಿದೆ. ಈಗೃಹಲಕ್ಷ್ಮಿ ಯೋಜನೆಯಲ್ಲಿ ₹287 ಕೋಟಿ, ಗೃಹಜ್ಯೋತಿ ಯೋಜನೆ ಯಲ್ಲಿ ₹137 ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ ₹63 ಕೋಟಿ, ಯುವನಿಧಿ ಯೋಜನೆಯಲ್ಲಿ ₹3.23 ಕೋಟಿ, ಶಕ್ತಿ ಯೋಜನೆಯಲ್ಲಿ ₹82 ಕೋಟಿ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು.

ಅಭಿಜಿತ್ ಪೂಜಾರಿ ಮಾತನಾಡಿ ವಸತಿ ಯೋಜನೆಯಡಿ ಮನೆ ಪಡೆದವರಿಗೆ ಇ-ಖಾತೆ ಸಿಗದೆ ಮತ್ತು ಭೂ ಪರಿವರ್ತನೆ ಆಗದೆ, ಮನೆಸಂಖ್ಯೆ ಸಿಗದ್ದರಿಂದ ವಿದ್ಯುತ್ ಸಂಪರ್ಕ ಪಡೆಯಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಮ್ಯಾನ್ಯುವಲ್ ಆಗಿ ಎನ್ಒಸಿ ಕೊಡಬೇಕು ಎಂದು ಒತ್ತಾಯಿಸಿದರು. ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದಕ್ಕೆ ಕಡಿವಾಣ ಹಾಕಬೇಕಿದೆ ಮತ್ತು ಬ್ರೋಕರ್ ಹಾವಳಿ ನಿಯಂತ್ರಿಸಬೇಕು ಎಂದು ಜಹೀರ್ ಅಹಮ್ಮದ್ ಆಗ್ರಹಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ ಕೆ.ಜಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-28-822363954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.