ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ 'ಟೈಮ್ಸ್‌ ಸ್ಕ್ವೇರ್‌'ನಲ್ಲಿ ಸತೀಶ್ ಆಚಾರ್ಯ ಕಲಾಕೃತಿ ಪ್ರದರ್ಶನ

ಅಮೆರಿಕದಲ್ಲಿ ಕುಂದಾಪುರದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರ ಕಲಾಕೃತಿ ಪ್ರದರ್ಶನ
Last Updated 23 ಜೂನ್ 2022, 14:26 IST
ಅಕ್ಷರ ಗಾತ್ರ

ಕುಂದಾಪುರ: ಅಮೆರಿಕದ ನ್ಯೂಯಾರ್ಕ್‌ ನಗರದ ಪ್ರತಿಷ್ಠಿತ ಟೈಮ್ಸ್‌ ಸ್ಕ್ವೇರ್‌ನಲ್ಲಿ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆ ಈ ಬಾರಿ ಆಯೋಜಿಸಿದ್ದ ಎನ್‌ಎಫ್‌ಟಿ ಕಲಾಕೃತಿಗಳ ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನಗೊಂಡಿದೆ.

ಅಮೆರಿಕದ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಕಲಾವಿದರಲ್ಲಿ ಸಮನ್ವಯ ಸಾಧಿಸಿ ಅವರನ್ನು ಒಗ್ಗೂಡಿಸುವ ಸದುದ್ದೇಶದಿಂದ ಈ ಕಲಾಕೃತಿ ಪ್ರದರ್ಶವನ್ನು ಏರ್ಪಡಿಸಿಕೊಂಡು ಬರುತ್ತಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ಆರ್ಟ್‌ಗೆ ಒತ್ತು ನೀಡಿದೆ.

ಜೂ.20 ರಿಂದ ಜೂ.23 ರವರೆಗೆ ನಡೆದ ಈ ಕಲಾಕೃತಿ ಪ್ರದರ್ಶನದಲ್ಲಿ ಜಗತ್ತಿನ ವಿವಿಧ ಭಾಗದಿಂದ ಅನೇಕ ಕಲಾಕೃತಿಗಳು ಬಂದಿದ್ದವು. ಅದರಲ್ಲಿ ಆಯ್ದ 200 ಕಲಾಕೃತಿಗಳನ್ನು ಆಯ್ಕೆ ಮಾಡಿಕೊಂಡು ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸತೀಶ್ ಆಚಾರ್ಯ ಅವರ ‘ಐ ಕೇರ್’ ಶೀರ್ಷಿಕೆಯ ಎನ್‌ಎಫ್‌ಟಿ ಡಿಜಿಟಲ್ ಕಲಾಕೃತಿಯೂ ಒಂದಾಗಿತ್ತು.

ತಂತ್ರಜ್ಞಾನದ ಬೆಂಬಲದೊಂದಿಗೆ ಆಧುನೀಕತೆಯತ್ತ ದಾಪುಗಾಲು ಹಾಕುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಾನವನಗಿಂತ ಯಂತ್ರವೇ ಹೆಚ್ಚು ಮಾನವೀಯತೆ ತೋರಿದರೂ ಆಶ್ಚರ್ಯವಿಲ್ಲ ಎನ್ನುವ ಸಂದೇಶದಲ್ಲಿ ಈ ಕಲಾಕೃತಿಯನ್ನು ರಚಿಸಲಾಗಿತ್ತು. ಭಾರತದ ಅಗ್ರಗಣ್ಯ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಸತೀಶ್ ಆಚಾರ್ಯ 2015 ರಲ್ಲಿ ಪೋರ್ಬ್ಸ್ ಇಂಡಿಯಾ ಗುರುತಿಸಿದ 24 ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ‘ಕಾರ್ಟೂನ್ ಹಬ್ಬ’ ಪ್ರಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT