ಕುಂದಾಪುರ: ವೃತ್ತಿ, ಪ್ರವೃತ್ತಿ ಹಾಗೂ ಜೀವನದ ಜತೆಯಲ್ಲಿ ಸಮಾಜದ ಬಗ್ಗೆ ತುಡಿತವಿರುವ ಸಮಾಜಮುಖಿಗಳಾಗಿರುವುದೇ ಬದುಕಿನ ನಿಜವಾದ ಶ್ರೇಷ್ಠತೆ ಎಂದು ಟೆಲಿಕಾಂ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಶ್ರೀಧರ ಶೆಟ್ಟಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮೇ 31ರಂದು ಹಮ್ಮಿಕೊಂಡಿರುವ ಜಿ.ಕುಶಲ ಹೆಗ್ಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎನ್ನುವ ಕಾಳಜಿಯಲ್ಲಿ ಸ್ಥಾಪನೆಗೊಂಡಿದ್ದ ಕುಂದಾಪುರದ ಬಂಟ್ಸ್ ಹಾಸ್ಟೆಲ್ ನಿರ್ವಹಣೆ ವೇಳೆ, ಸ್ವಂತಕ್ಕೆ ಬಂದಿದ್ದ ಗೇಣಿ ಅಕ್ಕಿಯನ್ನು ನಿಲಯವಾಸಿಗಳಿಗೆ ನೀಡುವ ಔದಾರ್ಯ ಜಿ.ಕುಶಲ ಹೆಗ್ಡೆ ಅವರಿಗೆ ಇತ್ತು ಎಂದರು.

ದಿ.ಜಿ.ಕುಶಲ ಹೆಗ್ಡೆ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಯು.ಎಸ್.ಶೆಣೈ ಮಾತನಾಡಿ, ದಶಕಗಳ ಕಾಲ ಕುಂದಾಪುರದ ನಿತ್ಯ ಕಾರ್ಯ-ಕಲಾಪಗಳ ಅವಿಭಾಜ್ಯವಾಗಿದ್ದ ಕುಶಾಲ ಹೆಗ್ಡೆ ಅವರಲ್ಲಿ ಸಾಮಾಜಿಕ ಚಿಂತನೆಗಳಿದ್ದವು. ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನದ ಬಳಿಕ ಸ್ಥಾಪನೆಗೊಂಡ ಟ್ರಸ್ಟ್ ಮೂಲಕ ಅವರ ಮಕ್ಕಳು ಹಾಗೂ ಕುಟುಂಬಿಕರು ಅವರ ಮೌಲ್ಯಗಳನ್ನು ಹಾಗೂ ಆದರ್ಶವನ್ನು ಉಳಿಸುವ ಅನೇಕ ಕೊಡುಗೆ ಹಾಗೂ ಕೆಲಸಗಳನ್ನು ಮಾಡುತ್ತಿದ್ದಾರೆ. ಜನ್ಮ ಶತಾಬ್ದಿ ಕಾರ್ಯಕ್ರಮದ ಮೂಲಕ ಅವರ ಒಳ್ಳೆಯ ಕೆಲಸಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅರುಣಕುಮಾರ ಶೆಟ್ಟಿ, ಜಿ.ಕುಶಲ ಹೆಗ್ಡೆ ಜನ್ಮ ಶತಮಾನೋತ್ಸವ ಸಂಯೋಜಕ ಬಿ.ಉದಯ್ ಕುಮಾರ್ ಹೆಗ್ಡೆ, ರಾಜ್ಯ ವೈನ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದ್ ರಾಜ್ ಹೆಗ್ಡೆ ಬ್ರಹ್ಮಾವರ ಮಾತನಾಡಿದರು.

ಜಿ.ಕುಶಲ ಹೆಗ್ಡೆ ಚಾರಿಟಬಲ್ ಟ್ರಸ್ಟ್ನ ಸ್ನೇಹಾ ಪಿ.ರೈ, ಬಿ.ಕಿಶೋರ ಹೆಗ್ಡೆ, ಜಿ.ಸಂತೋಷ ಕುಮಾರ್ ಶೆಟ್ಟಿ, ಸುಜಾತ ಉದಯ್ ಕುಮಾರ್ ಹೆಗ್ಡೆ, ನಾರಾಯಣ ದೇವಾಡಿಗ, ಕೆ.ಕೆ.ರಾಮನ್, ಬಂಟರ ಯಾನೆ ನಾಡವರ ಸಂಘದ ಮಾಜಿ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ತಾಲ್ಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಡಾ.ನಿತ್ಯಾನಂದ ಶೆಟ್ಟಿ ಅಂಪಾರು, ಅಧ್ಯಕ್ಷ ನಿತೇಶ್ ಶೆಟ್ಟಿ ಬಸ್ರೂರು, ಉದ್ಯಮಿ ಕೆ.ಆರ್.ನಾಯಕ್, ಶತಮಾನೋತ್ಸವ ಸಮಿತಿಯ ಪಡುಕೆರೆ ಉದಯ್ ಕುಮಾರ್ ಶೆಟ್ಟಿ, ಪ್ರವೀಣ್ ಯಕ್ಷೀಮಠ, ಎನ್.ಮಂಜಯ್ಯ ಶೆಟ್ಟಿ, ಸಬ್ಲಾಡಿ, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಲಗದ್ದೆ ಶಶಿಧರ ಶೆಟ್ಟಿ, ಎಚ್.ಸೋಮಶೇಖರ ಶೆಟ್ಟಿ ಇದ್ದರು.

ಶತಮಾನೋತ್ಸವ ಸಮಿತಿಯ ರಾಜೇಶ್ ಕೆ.ಸಿ ನಿರೂಪಿಸಿದರು. ಯೋಗಾನಂದ ಹೆಗ್ಡೆ ಗಿಳಿಯಾರ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-28-449752836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.