ಕುಂದಾಪುರ: ‘ಸನಾತನ ಹಿಂದೂ ಧರ್ಮವನ್ನು ಉದ್ಧಾರ ಮಾಡಿ ಎಲ್ಲ ಜನರನ್ನು ಒಂದುಗೂಡಿಸಿ ಐಕಮತ್ಯ ಸ್ಥಾಪಿಸಿ, ಧರ್ಮ ಶಕ್ತಿಯನ್ನು ಬೆಳಗಿದ ಮಹಾನ್ ಪುರುಷ ಆಚಾರ್ಯ ಶಂಕರರು. ಅವರು ಮಾಡಿದ ಉಪದೇಶ ದಿಂದ ಇಡೀ ಲೋಕಕ್ಕೆ ಒಳಿತಾಗಿದೆ. ಉತ್ತಮ ಸಮಾಜಕ್ಕೆ ಬೇಕಾದ ಎಲ್ಲಾ ಉಪದೇಶಗಳನ್ನು ಆಚಾರ್ಯರು ನೀಡಿದ್ದಾರೆ’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಈಚೆಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಆಶೀರ್ವಚನ ನೀಡಿದರು.

ಪುರಾಣ ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಶಂಕರರ ಜಯಂತಿ ಆಚರಿಸಿಕೊಂಡು ಬರುತ್ತಿರುವ ವಿಷಯವು ಸಂತಸ ತಂದಿದೆ ಎಂದರು.

ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ನೇತೃತ್ವದ ಋತ್ವೀಜರ ತಂಡ ವೇದಘೋಷ, ವಾದ್ಯಗಳ ಮೆರವಣಿಗೆಯ ಮೂಲಕ ಸ್ವಾಮೀಜಿಯನ್ನು ಬರ ಮಾಡಿಕೊಂಡಿತು. ದೇವಸ್ಥಾನದ ಬೆಳ್ಳಿ ರಥವನ್ನು ವೀಕ್ಷಿಸಿದ ಸ್ವಾಮೀಜಿ ರಥದ ಶಿಲ್ಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮೀಜಿಯ ಆಪ್ತ ಸಹಾಯಕ ಶಮಂತ ಶರ್ಮಾ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ರಥ ಶಿಲ್ಪಿ ರಾಜಗೋಪಾಲ ಆಚಾರ್ಯ, ಕೋಟಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ.ಸುಧಾಕರ ನಂಬಿಯಾರ್, ರಾಜೀವ ಶೆಟ್ಟಿ, ಉಷಾ ಬಂಗೇರ ಮಾರ್ಕೋಡು, ಗಾಯತ್ರಿ ಆಚಾರ್, ಗಣಪ ಪೂಜಾರಿ, ಪಾಕ ತಜ್ಞ ರಮೇಶ್ ಭಟ್ ಕೋಟೇಶ್ವರ, ಪ್ರಮುಖರಾದ ಸುರೇಶ್ ಬೆಟ್ಟಿನ್, ಶಂಕರ್ ಕೋಟೇಶ್ವರ, ಮುರಳೀಧರ ಭಟ್ಟ, ನಿವೃತ್ತ ಉಪನ್ಯಾಸಕ ಪ್ರೊ.ಶಂಕರ ರಾವ್ ಕಾಳಾವರ, ಗಣೇಶ ಪುತ್ರನ್, ಬಾಬಣ್ಣ ಪೂಜಾರಿ, ವೈ.ಎನ್.ವೆಂಕಟೇಶ ಮೂರ್ತಿ ಭಟ್, ಕುಂಭಾಸಿ ಶೃಂಗೇರಿ ಶಂಕರ ಮಠದ ಲಕ್ಷ್ಮೀಶ ಅಡಿಗ ಬಡಾಕೆರೆ, ನಾಗೇಂದ್ರ ಅಡಿಗ ಬಡಾಕೆರೆ ಇದ್ದರು.

ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಸ್ವಾಗತಿಸಿದರು. ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಬಡಾಕೆರೆ ಲೋಕೇಶ ಅಡಿಗ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-684450547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.