ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಚರ್ಚ್ನ ಮಹಿಳಾ ಆಯೋಗದ ಸಹಯೋಗದಲ್ಲಿ ಈಚೆಗೆ ತಾಯಂದಿರ ದಿನ ಆಚರಿಸಲಾಯಿತು.

ಮೂಡಬೆಳ್ಳೆ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕ ಫಾ. ಸಿರಿಲ್ ಲೋಬೊ ಪ್ರಧಾನ ಯಾಜಕರಾಗಿ ಬೆಳಗಿನ ಬಲಿಪೂಜೆ ನೆರವೇರಿಸಿದರು.

ಜಯರಾಣಿ ಇಂಗ್ಲಿಷ್ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ತಾಯಂದಿರಿಗಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಿರಿಲ್ ಲೋಬೊ ಮಾತನಾಡಿದರು. ಚರ್ಚ್ನ ಧರ್ಮಗುರು ಎಡ್ವಿನ್ ಡಿಸೋಜ ಸಂದೇಶ ನೀಡಿದರು. ಧರ್ಮ ಭಗಿನಿಯರು, ಮಹಿಳೆಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಸ್ತ್ರೀ ಸಂಘಟನೆಯ ಕೇಂದ್ರೀಯ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್, ಪಾಲನಾ ಮಂಡಳಿ ಪ್ರಮುಖರು, ಆಯೋಗಗಳ ಸಂಯೋಜಕರು ಇದ್ದರು.

ಮಹಿಳಾ ಆಯೋಗದ ಅಧ್ಯಕ್ಷೆ ವಿಲ್ಮಾ ಅಂದ್ರಾದೆ ಸ್ವಾಗತಿಸಿದರು. ನಿರ್ಮಲಾ ಮಿನೇಜಸ್ ವರದಿ ವಾಚಿಸಿದರು. ಸವಿತಾ ಮೆಂಡೊನ್ಸಾ ವಂದಿಸಿದರು. ರೀನಾ ಮೆಂಡೊನ್ಸಾ ಡಯಾನ ಮಿನೇಜಸ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-28-601815876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.