ಕುಂದಾಪುರ: ಕರ್ನಾಟಕ ರಾಜ್ಯ ಸರ್ಕಾರ ಸಾರಿಗೆ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗಾಗಿ ರಚಿಸಲಾದ ಕರ್ನಾಟಕ ಮೋಟಾರ್ ಸಾರಿಗೆ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯನ್ನು ಕಾರ್ಮಿಕ ಇಲಾಖೆಯಿಂದ ಸಾರಿಗೆ ಇಲಾಖೆಗೆ ವರ್ಗಾಯಿಸುವುದನ್ನು ತಾಲ್ಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ ತೀವ್ರವಾಗಿ ವಿರೋಧಿಸಿದೆ.

ರಾಜ್ಯ ವ್ಯಾಪಿ ನಡೆದ ಪ್ರತಿಭಟನೆಯ ಭಾಗವಾಗಿ ಕುಂದಾಪುರದಲ್ಲಿ ತಾಲ್ಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಸಂಘದ ಸದಸ್ಯರು ಶಾಸ್ತ್ರಿ ಸರ್ಕಲ್ ಬಳಿಯಿಂದ ಕಂದಾಯ ಸಹಾಯಕ ಆಯುಕ್ತರ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ತಹಶೀಲ್ದಾರ ಪ್ರದೀಪ್ ಕುರ್ಡೇಕರ್ ಅವರು ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಲಾಯಿತು

ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ವಿ ಮಾತನಾಡಿ ಸಾರಿಗೆ ಇಲಾಖೆಯಲ್ಲಿ ಚಾಲಕರ ಮತ್ತು ನಿರ್ವಾಹಕರು ಸೇರಿದಂತೆ ಕೆಲವೇ ವಿಭಾಗದ ನೌಕರರ ಮಾಹಿತಿ ಹೊಂದಿದ್ದು ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ಗ್ಯಾರೇಜ್, ಪೇಂಟಿಂಗ್, ವೆಲ್ಡಿಂಗ್ ,ಟಿಂಕರಿಂಗ್ ಬಾಡಿ ಬಿಲ್ಡಿಂಗ್ ಟೈಮ್ ಕೀಪರ್ ಮುಂತಾದ ವಿಭಾಗದ ಮಾಹಿತಿ ಸಾರಿಗೆ ಇಲಾಖೆ ಅಡಿ ಬಾರದೆ ಇರುವುದರಿಂದ ಕಲ್ಯಾಣ ಮಂಡಳಿ ನಿರ್ವಹಣೆಯನ್ನು ಕಾರ್ಮಿಕ ಇಲಾಖೆಯೇ ಮಾಡುವುದು ಸೂಕ್ತವಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟರು ಹಾಗೂ ಸಾರಿಗೆ ಕಾರ್ಮಿಕರಿಗಾಗಿ ಸಂಗ್ರಹಿಸಿದ ಸೆಸ್ ಹಣದಿಂದ ಕಾರ್ಮಿಕರಿಗೆ ಸೌಲಭ್ಯ ವಿತರಿಸಲು ಸರ್ಕಾರವನ್ನು ಒತ್ತಾಯಿಸಿದರು .

ಸಂಘದ ಅಧ್ಯಕ್ಷ ರಮೇಶ್ ವಿ ಮಾತನಾಡಿ ದಿನನಿತ್ಯ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಆಟೊ ಚಾಲಕರ ಜೇಬಿಗೆ ಕತ್ತರಿಯಾಗುತ್ತಿದೆ. ಚಾಲಕರ ಆದಾಯ ಕಸಿದು ಅವರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡ ರಾಜೇಶ್ ಪಡುಕೋಣೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಗ್ಯಾಸ್ ಕೊರತೆಯಿಂದಾಗಿ 10 ರಿಂದ 12 ಗಂಟೆ ಬಂಕ್ ಎದುರು ಸಾಲು ನಿಂತು ಬಾಡಿಗೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಶೀಘ್ರ ಗಮನಹರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವವನ್ನು ಸಂಘದ ಮುಖಂಡರಾದ ರಾಜು ದೇವಾಡಿಗ, ಪದಾಧಿಕಾರಿಗಳಾದ ನರಸಿಂಹ , ಕೃಷ್ಣ ಪೂಜಾರಿ, ಜನ್ನಣ್ಣ, ಶೇಖರ್ ದೋಣಿಮನೆ , ದಿನೇಶ್, ರವಿ ಯ.ವಿ.ಎಂ, ಮಂಜುನಾಥ್ ಶೇರಿಗಾರ್, ಸಿಐಟಿಯು ಸಂಘಟನೆಯ ಮುಖಂಡರಾದ ನರಸಿಂಹ ಎಚ್, ಚಿಕ್ಕ ಮೊಗವೀರ ಬಲ್ಕಿಸ್, ಜೆಎಂಎಸ್ನ ಶೀಲಾವತಿ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-28-1694728508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.