ಕುಂದಾಪುರ: ಬಸ್ರೂರಿನ ತುಳುವೇಶ್ವರ ದೇವಸ್ಥಾನದಲ್ಲಿ ಬಿಸು ಸಂಕ್ರಮಣದ ಅಂಗವಾಗಿ ದೀಪಾರಾಧನೆ, ಬುಲೆ (ಬೆಳೆ) ಸಮರ್ಪಣಾ ಕಾರ್ಯಕ್ರಮ ನಡೆಯಿತು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಕ್ತರು ದೀಪಗಳನ್ನು ಬೆಳಗಿಸಿ ತುಳುವೇಶ್ವರ ಹಾಗೂ ಪರಿವಾರ ದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬುಲೆ ಸಮರ್ಪಣೆ ಮೂಲಕ ದೇವರ ಅನುಗ್ರಹ ಕೋರಲಾಯಿತು. ಮುಲ್ಕಿ ತಾಲ್ಲೂಕು ತುಳುವ ಮಹಾಸಭೆ ಸಮಿತಿಯಿಂದ ಬುಲೆ ಕಾಣಿಕೆ ಸಮರ್ಪಣೆ ನಡೆಯಿತು. ತುಳುವೇಶ್ವರ ದೇವಸ್ಥಾನದ ಪುನರ್ ವೈಭವೀಕರಣಕ್ಕಾಗಿ ಭೂದಾನ ಸೇವೆಯ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಯಿತು.

ಅರ್ಚಕ ಮಹೇಶ್ ಕಿಣಿ, ತುಳು ವರ್ಲ್ಡ್ ಫೌಂಡೇಷನ್ ನಿರ್ದೇಶಕ ಡಾ.ರಾಜೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ವಸಂತ ರೈ, ಕಾರ್ಯದರ್ಶಿ ಹರಿಪ್ರಸಾದ್ ರೈ ಜಿ.ಕೆ, ಮುಲ್ಕಿ ಬಂಟ್ಸ್ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಶೆಟ್ಟಿ ಕೊಲ್ನಾಡು, ಮುಲ್ಕಿ ಬಿಲ್ಲವ ಸಂಘದ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ತುಳುವ ಮಹಾಸಭೆ ಸಂಚಾಲಕ ಗಣೇಶ್ ಬಂಗೇರ, ಪ್ರಮುಖರಾದ ಕೃಷ್ಣಮೂರ್ತಿ ಅಡಿಗ ಬಸ್ರೂರು, ಭಾನುಮತಿ ಶೆಟ್ಟಿ ಕಕ್ವಗುತ್ತು, ಕೃಷ್ಣಮೂರ್ತಿ ರಾವ್ ಪಾದೆಬೆಟ್ಟು, ಸನ್ಮತ್ ಹೆಗ್ಡೆ ಬಸ್ರೂರು, ದಿನಕರ ಕಿಣಿ, ವಿನಯ ಆರ್. ಆಳ್ವ, ಗೀತಾ ಗಣೇಶ್, ಭಾರತಿ ರೈ ಮುಲ್ಕಿ, ಪ್ರಜ್ವಲ್ ಆಳ್ವ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-28-910632464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.