ಕುಂದಾಪುರ: ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ತೂರು ಗ್ರಾಮದ ಸರ್ವೆ ನಂಬ್ರ 219/2ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನಿರ್ಮಿಸಲು ಉದ್ದೇಶಿಸಿರುವ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಯೋಜನೆಯ ಕುರಿತು ಚರ್ಚಿಸಲು ಬುಧವಾರ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವತಿಯಿಂದ ಕರೆಯಲಾಗಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ಮಲ ತ್ಯಾಜ್ಯ ಸಂಸ್ಕರಣಾ ಘಟಕ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಮಗೆ ಆದೇಶ ನೀಡಿದೆ. ಸ್ಥಳೀಯರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಯೋಜನಾಧಿಕಾರಿ ವೀಣಾ ಮಾಹಿತಿ ನೀಡುವ ವೇಳೆ, ಸ್ಥಳೀಯರು, ಈ ಯೋಜನೆ ನಮ್ಮೂರಿಗೆ ತರುವುದು ಬೇಡವೇ ಬೇಡ ಎಂದು ಘೋಷಣೆ ಕೂಗಿದರು.

ಕೊರಗ ಸಂಘಟನೆ ಮುಖಂಡ ಗಣೇಶ್ ವಿ. ಕುಂದಾಪುರ ಮಾತನಾಡಿ, ಈ ಯೋಜನೆ ಜಾರಿಗೆ ತರುವಾಗ ಸ್ಥಳೀಯ ಆಡಳಿತವನ್ನು ದೂರ ಇಟ್ಟಿದ್ದಾರೆ. ಪಂಚಾಯಿತಿಯಿಂದ ಅನುಮತಿ ಪಡೆಯದೆ, ಸಾಲಿಗ್ರಾಮ ಪ. ಪಂ. ಇಲ್ಲಿ ಮಲ ತ್ಯಾಜ್ಯ ಘಟಕ ನಿರ್ಮಿಸಲು ಮುಂದಾಗಿದೆ ಎಂದರು.

ವಕೀಲ ಅವಿನಾಶ್ ಶೆಟ್ಟಿ ಬೇಳೂರು ಮಾತನಾಡಿ, ಉಳ್ತೂರು, ಕೆದೂರು, ಬೇಳೂರು ಈ ಮೂರು ಗ್ರಾಮದ ಗ್ರಾಮಸ್ಥರಿಗೆ ಈ ಯೋಜನೆ ಅವಶ್ಯಕತೆ ಇದೆಯೇ ಎನ್ನುವುದನ್ನು ಪರಿಶೀಲಿಸಲಿ. 15 ವರ್ಷಗಳ ಹಿಂದೆ ತ್ಯಾಜ್ಯ ಹಾಕಲು ಖರೀದಿ ಮಾಡಿದ್ದ ಜಾಗದಲ್ಲಿ ಮಲ ತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

ಪ.ಪಂ. ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಬರುವಾಗ ಒಂದು ಗಂಟೆ ತಡವಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೋಟ ಠಾಣಾಧಿಕಾರಿ ಮಧ್ಯ ಪ್ರವೇಶಿಸಿ ಸಭೆ ಮುನ್ನಡೆಸಲು ಅನುವು ಮಾಡಿಕೊಟ್ಟರು. ಪ್ರಮುಖರಾದ ಪ್ರಶಾಂತ್ ಶೆಟ್ಟಿ ಉಳ್ತೂರು, ವಿಜಯ ಕುಮಾರ್ , ಜ್ಯೋತಿ ದೇವಾಡಿಗ ಉಳ್ತೂರು, ಅಜಿತ್ ಶೆಟ್ಟಿ ಉಳ್ತೂರು, ಅವಿನಾಶ್ ಉಳ್ತೂರು, ಸುಧೀರ್ ಮಲ್ಯಾಡಿ, ಪ್ರತಾಪ್ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-28-38454482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.