ಉಳ್ತೂರಿನ ಜನವಸತಿ ಪ್ರದೇಶದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಸರಿಯಲ್ಲ. ಗ್ರಾಮಸ್ಥರು ಸಂಘಟಿತರಾಗಿ ಕಾನೂನು ಹೋರಾಟ ನಡೆಸಬೇಕು. ಎಂ.ಆರ್.ಎಫ್ ಘಟಕ ನಿರ್ಮಾಣದ ವಿರುದ್ಧವೂ ಹೋರಾಟ ಅನಿವಾರ್ಯ
ಗಣೇಶ್ ವಿ. ಕೊರಗ ಸಂಘಟನೆ ಮುಖಂಡ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲ ತ್ಯಾಜ್ಯ ಸಂಸ್ಕರಣಾ ಘಟವನ್ನು ಉಳ್ತೂರಿನಲ್ಲಿ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಡಿಸಿ ಅವರ ಗಮನಕ್ಕೂ ಈ ವಿಚಾರವನ್ನು ತಂದಿದ್ದೇವೆ
ಅವಿನಾಶ್ ಉಳ್ತೂರು ಸಾಮಾಜಿಕ ಕಾರ್ಯಕರ್ತ
ದೇವಸ್ಥಾನ ಪಕ್ಷಿಧಾಮ ಶಾಲೆ ಅಂಗನವಾಡಿ ವಾಣಿಜ್ಯ ಕಟ್ಟಡ ಬ್ಯಾಂಕ್ ಸೇರಿದಂತೆ 10 ಸಾವಿರಕ್ಕೂ ಅಧಿಕ ಮಂದಿ ಜನವಸತಿ ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮಲ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಬಿಡುವುದಿಲ್ಲ