ಕುಂದಾಪುರ: ಪುರಸಭಾ ವ್ಯಾಪ್ತಿಗೆ ಹಾಗೂ ಮುಂದಿನ ಹತ್ತು ವರ್ಷಗಳಿಗೆ ಅಗತ್ಯವಾಗುವ ನೀರಿನ ಪ್ರಮಾಣ ಮತ್ತು ಲಭ್ಯತೆ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಶಾಸಕ ಎ. ಕಿರಣ್ಕುಮಾರ ಕೊಡ್ಗಿ ಸೂಚಿಸಿದರು.

ಶನಿವಾರ ನಡೆದ ಪುರಸಭಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಲಭ್ಯವಿರುವ ನೀರು ಮುಂದಿನ ಬೇಸಿಗೆಗೆ ಸಾಕಾಗುವುದಿಲ್ಲ. ಭವಿಷ್ಯದ ಬೇಡಿಕೆ, ಅಗತ್ಯ ಮೂಲಸೌಕರ್ಯ, ಮೋಟಾರ್ ಸಾಮರ್ಥ್ಯ, ಶುದ್ಧೀಕರಣ ಘಟಕ ಹಾಗೂ ಪೈಪ್ಲೈನ್ ವಿಸ್ತರಣೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅಂದಾಜು ಎಷ್ಟು ಖರ್ಚಾಗಬಹುದು ಎನ್ನುವುದರ ಕುರಿತ ಸಮಗ್ರ ವರದಿ ಸಲ್ಲಿಸಬೇಕು. ಸರ್ಕಾರದಿಂದ ಅನುದಾನ ಸಿಗುವ ಭರವಸೆ ಕಡಿಮೆ ಇದ್ದರೂ ಪ್ರಯತ್ನ ಮುಂದುವರಿಸಬೇಕು ಎಂದು ಹೇಳಿದರು.

ಜಲಸಿರಿ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ ಬೇಡಿಕೆ ಇದ್ದ 6,450 ಸಂಪರ್ಕಗಳ ಪೈಕಿ 4,952 ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದೆ. 736 ಮನೆಗಳು ಬಾವಿ ಇರುವ ಕಾರಣ ಸಂಪರ್ಕ ಬೇಡವೆಂದಿದ್ದು, ಕೆಲವು ಮನೆಗಳಿಗೆ ದಾಖಲೆ ಸಮಸ್ಯೆಯಿಂದ ಸಂಪರ್ಕ ಸಾಧ್ಯವಾಗಿಲ್ಲ. 142 ಮನೆಗಳಿಗೆ ಸಂಪರ್ಕ ಬಾಕಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಸ್ರೂರು, ಕೋಟೇಶ್ವರ, ಬಳ್ಕೂರು, ಹಂಗಳೂರು, ಕೋಣಿ, ಆನಗಳ್ಳಿ, ಕಂದಾವರ ಹಾಗೂ ಜಪ್ತಿ ಗ್ರಾಮಗಳಿಗೂ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಲಸಿರಿ ಯೋಜನೆಯಡಿ ಪ್ರತಿ ತಿಂಗಳು ಸರಾಸರಿ 25ರಿಂದ 30 ಹೊಸ ಅರ್ಜಿಗಳು ಬರುತ್ತಿದ್ದು, ವರ್ಷಕ್ಕೆ 300 ಹೊಸ ಸಂಪರ್ಕಗಳು ಸೇರುತ್ತಿವೆ. ಮುಂದಿನ ವರ್ಷದಲ್ಲೇ ಯೋಜನೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಸದ್ಯ 100 ಎಚ್.ಪಿ ಸಾಮರ್ಥ್ಯದ ಮೋಟಾರ್ ಬಳಕೆಯಲ್ಲಿದ್ದು, ಹೆಚ್ಚಿನ ಸಾಮರ್ಥ್ಯದ ಪಂಪ್ ಬಳಕೆಗೆ ಪೈಪ್ಲೈನ್ ವಿಸ್ತರಣೆ ಅಗತ್ಯವಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಜಲಸಿರಿ ಅಧಿಕಾರಿಗಳು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದ ಕೆಲವಷ್ಟನ್ನು ವಿಲೇವಾರಿ ಮಾಡಿ, ಉಳಿದ ಕೆಲವನ್ನು ಕಂದಾವರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸುತ್ತಿದ್ದೀರಿ. ಇದು ಮುಂದೊಂದು ದಿನ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಈ ಕಸವನ್ನು ವಿಲೇವಾರಿ ಮಾಡುವುದು ಹೇಗೆ ಎನ್ನುವುದರ ಕುರಿತು ಎನ್ಜಿಒ ಅಥವಾ ಬೇರೆ ಯಾರಾದರೂ ಅನುಭವಿಗಳಿಂದ ಸಲಹೆ ಪಡೆದು, ಸಮಸ್ಯೆ ನಿವಾರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಇ-ಖಾತಾ ಅರ್ಜಿಗಳ ವಿಷಯದಲ್ಲಿ ಒಟ್ಟು 13 ಸಾವಿರ ಅರ್ಜಿಗಳ ಪೈಕಿ 4,800 ಮಾತ್ರ ವಿಲೇವಾರಿಯಾಗಿದ್ದು, 8 ಸಾವಿರ ಅರ್ಜಿಗಳು ಬಾಕಿಯಿವೆ. ಬಿ-ಖಾತಾ 122 ಆಗಿದೆ. ಕಳೆದ ವರ್ಷದಿಂದ 960 ಅರ್ಜಿಗಳು ವಿಲೇವಾರಿಯಾಗಿವೆ. 188 ಅರ್ಜಿಗಳು ವಿವಿಧ ಕಾರಣಗಳಿಂದ ಬಾಕಿಯಿವೆ ಎಂದು ಅಧಿಕಾರಿಗಳು ತಿಳಿಸಿದರು. ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕುರಿತು ಸ್ಪಷ್ಟ ಯೋಜನೆ ರೂಪಿಸಬೇಕು. ಖಾಲಿ ಜಾಗ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರೂ, ಅಂಗಡಿಗಳ ಮುಂದೆ ಪಾರ್ಕಿಂಗ್ ಗುರುತು ಮಾಡಿ ಶುಲ್ಕ ನಿಗದಿಪಡಿಸಲು ಟೆಂಡರ್ ಕರೆಯಲು ಹೊರಟಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಕೊಡ್ಗಿ ಅವರು, ಕುರಿತು ಪ್ರತಿ ಸಲವೂ ನಾವೇ ಫಾಲೋಅಪ್ ಮಾಡಬೇಕೇ ? ನಿಮಗೂ ಆಸಕ್ತಿ ಬೇಡವೇ ? ಪರಿಹಾರ ಏನು ಎನ್ನುವುದರ ಬಗ್ಗೆ ಯೋಚಿಸೋದು ಬೇಡವೇ ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪುರಸಭೆ ಆಡಳಿತಾಧಿಕಾರಿಯಾದ ಉಪವಿಭಾಗದ ಸಹಾಯ ಆಯುಕ್ತೆ ರಶ್ಮಿ ಎಸ್.ಆರ್., ಪುರಸಭೆ ಮುಖ್ಯಾಧಿಕಾರಿ ಆನಂದ್, ಪುರಸಭೆ ಹಾಗೂ ಜಲಸಿರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-28-367599311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.