ಕುಂದಾಪುರ: ಇಲ್ಲಿಗೆ ಸಮೀಪದ ಕಾಳಾವರ ಗ್ರಾಮ ಪಂಚಾಯಿತಿಯ ಅಸೋಡು ಕುಮಾರಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ವಾರಾಹಿ ಕಾಲುವೆಗೆ ಬಿದ್ದಿದ್ದ ಕಾಡುಕೋಣವನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.

ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡುಕೋಣ ಶುಕ್ರವಾರ ಕಾಲುವೆಗೆ ಬಿದ್ದಿತ್ತು. 20 ತಾಸು ಕಾಲುವೆಯಲ್ಲಿದ್ದ ಕಾಡುಕೋಣ ಮೇಲೆ ಬರಲು ಯತ್ನಿಸುತ್ತಿತ್ತು. ಮೇಲೆ ಬರಲು ಅನುಕೂಲವಾಗುವಂತೆ ಅರಣ್ಯ ಇಲಾಖೆಯವರು ಶುಕ್ರವಾರವೇ ಕಾಲುವೆಗೆ ಮಣ್ಣು ತುಂಬಿಸಿದ್ದರು. ಆದರೂ ಪ್ರಯೋಜನ ಆಗಲಿಲ್ಲ.

ಶನಿವಾರ ಬೆಳಿಗ್ಗೆಯಿಂದಲೇ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿ ಮತ್ತಷ್ಟು ಮಣ್ಣು ಹಾಕಿ ಇಳಿಜಾರು ಮಾಡಿ, ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಕೋಣವನ್ನು ಮೇಲೆತ್ತಲಾಯಿತು. ಕಾಳಾವರ ಗ್ರಾ.ಪಂ. ಮಾಜಿ ಸದಸ್ಯ ಚಂದ್ರ ಪೂಜಾರಿ ಕಾಳಾವರ, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿಗಳಾದ ವಿನಯ್, ಗುರು ನಾಯ್ಕ್, ಸಿಬ್ಬಂದಿ ಮಾಲತಿ, ರಂಜಿತ್, ಸುನೀಲ್, ಅಶೋಕ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-28-883182968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.