ಶಿರ್ವ: ಕಾಪು ವಿಧಾನಸಭಾ ಕ್ಷೇತ್ರದ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಪಾಂಬೂರು ಕುರುಡಾಯಿ ಕೆರೆ ಗ್ರಾಮಸ್ಥರ ಮನವಿ ಮೇರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಭಾಗಶಃ ಅಭಿವೃದ್ಧಿಗೊಂಡಿದೆ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಲವಾರು ವರ್ಷಗಳಿಂದ ಹೂಳು ತುಂಬಿಕೊಂಡು ಉಪಯೋಗಕ್ಕೆ ಬಾರದೆ ನನೆಗುದಿಗೆ ಬಿದ್ದಿದ್ದ ಕೆರೆಗೆ ಈಗ ಮರುಜೀವ ಬಂದಂತಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ₹2.86 ಲಕ್ಷ ಅನುದಾನ ಹಾಗೂ ಪಾಂಬೂರು ಗ್ರಾಮಸ್ಥರಿಂದ ಸಂಗ್ರಹಿಸಲಾದ ₹1.50 ಲಕ್ಷ ಸೇರಿ ₹4.36 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ ಈ ಮಳೆಗಾಲದಲ್ಲಿ ನೀರು ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ.

1 ಎಕರೆ 60 ಸೆಂಟ್ಸ್ ವಿಸ್ತೀರ್ಣದ ಈ ಕೆರೆಗೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೆಳ್ಳೆ, ಪಾಂಬೂರು ಗ್ರಾಮಗಳಿಗೆ ನೀರಿನ ಸೌಲಭ್ಯಕ್ಕಾಗಿ ನಿರ್ಮಿಸಲಾಗಿತ್ತು. ಕುರುಡಾಯಿ ಕೆರೆ ಸುತ್ತಮುತ್ತಲಿನ ಪ್ರದೇಶದ ನೂರಾರು ಎಕರೆ ಕೃಷಿ ಗದ್ದೆಗಳಿಗೆ ನೀರಿನ ಮೂಲವಾಗಿತ್ತು. ಗ್ರಾಮ ಪಂಚಾಯಿತಿ ಸಹ ಕುಡಿಯುವ ನೀರಿನ ಪೂರೈಕೆಗಾಗಿ ಈ ಕೆರೆಯನ್ನೇ ಆಶ್ರಯಿಸಿತ್ತು.

ಗ್ರಾಮೀಣ ಭಾಗದಲ್ಲಿ ಅಳಿದುಳಿದ ಕೆರೆಗಳಲ್ಲಿ ಒಂದಾದ ಈ ಕೆರೆ ಸಮಗ್ರ ನಿರ್ವಹಣೆ ಕೊರತೆಯಿಂದ ಹೂಳು ತುಂಬಿಕೊಂಡಿತ್ತು. ಬೇಸಿಗೆಯಲ್ಲಿ ಈ ಭಾಗದ ಜನರು ನೀರಿಗಾಗಿ ಬವಣೆ ಪಡುವಂತಾಗಿತ್ತು. ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡರೂ ಅಲ್ಪ ಸ್ವಲ್ಪ ದುರಸ್ತಿ ಮಾಡಲಾಗುತ್ತಿತ್ತು. ಗ್ರಾಮಸ್ಥರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಅವರ ಈ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣ ಸ್ಪಂದಿಸಿದ ಅವರು, ಯೋಜನೆಯ ವತಿಯಿಂದ 21 ದಿನಗಳಲ್ಲಿ ಕುರುಡಾಯಿ ಕೆರೆ ಅಭಿವೃದ್ದಿ ಸಮಿತಿ ಜೊತೆ ಕೈಜೋಡಿಸಿ ಕೆರೆ ಅಭಿವೃದ್ಧಿಗೊಳಿಸಿದ್ದಾರೆ. ಕೆರೆದಂಡೆ ನಿರ್ಮಾಣ ಮಾಡಿ, ಹೂಳೆತ್ತಲಾಗಿದೆ. ಈ ಮಳೆಗಾಲದಲ್ಲಿ ಹೇರಳ ನೀರು ಸಂಗ್ರಹವಾಗಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದು ಗ್ರಾಮಸ್ಥರು ನಿರೀಕ್ಷೆಯಲ್ಲಿದ್ದಾರೆ.

847ನೇ ಕೆರೆ:

ಕುರುಡಾಯಿ ಕೆರೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಡಿ ಅಭಿವೃದ್ಧಿಗೊಂಡ 847ನೇ ಕೆರೆಯಾಗಿದೆ. ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ತಾಲ್ಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಮೇಲ್ವಿಚಾರಕ ದೇವೇಂದ್ರ ಸಹಕರಿಸಿದ್ದಾರೆ. ‘ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆರೆಗಳ ಅಭಿವೃದ್ಧಿ ಯಾಗಬೇಕಿದೆ’ ಎಂದು ಮಾಜಿ ಸದಸ್ಯ, ಕುರುಡಾಯಿ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಹೇಳಿದರು.

ಪಾಂಬೂರಿನ ಸಾಗುವಳಿ ಕೆರೆಗಳ ಇತಿಹಾಸ

ಬೆಳ್ಳೆ ಗ್ರಾಮದ ಪಾಂಬೂರಿನ ಕುರ್ಡಾಯಿ ಎಂಬ ಹಳ್ಳಿಯಲ್ಲಿ ವ್ಯವಸಾಯ ಸಾಗುವಳಿ ಮಾಡುವ ಉದ್ದೇಶದಿಂದ ಸಾವಿರ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಕೆರೆಗೆ ‘ಬನಕೆರೆ; ಎಂದೂ ಹೆಸರಿದೆ. ಪಾಂಬೂರಿನ ಬೈಲು ಪ್ರದೇಶದ ಕಿರಿಯಡ್ಕ ಬಳಿ ‘ಕಿರೆಮಜಲ್’ ಎಂಬ ಪ್ರಾಚೀನ ಕೆರೆಯಿದೆ. ಬಂಜಲ್ಕೆ ಎಂಬಲ್ಲಿ ಕೂಡಾ ಹಲವು ವರ್ಷಗಳ ಹಿಂದೆ ಅಪ್ಪಿ ಮೇಸ್ಟ್ರು ಎಂಬುವರು ‘ಬಂಜಲ್ಕೆ’ ಕೆರೆ ನಿರ್ಮಿಸಿದ್ದರು. ಪ್ರಾಚೀನ ಈಜು ಕೊಳದಂತಿರುವ ಈ ಸುಂದರ ಕೆರೆಯಿಂದ ಕೃಷಿ ನೀರಾವರಿಗೆ ಅನುಕೂಲವಾಗಿತ್ತು. ಪಾಂಬೂರು ಸಣ್ಣ ಗ್ರಾಮದಲ್ಲಿ ಬಹಳಷ್ಟು ಸಣ್ಣ ಪುಟ್ಟ ಕೆರೆಗಳಿದ್ದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.