ಭಾನುವಾರ, ನವೆಂಬರ್ 17, 2019
29 °C

ರಾಜ್ಯದಲ್ಲಿ ಸರ್ವ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರಲಿ: ಪೇಜಾವರ ಶ್ರೀ

Published:
Updated:

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸೇರಿದಂತೆ ಸರ್ವ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರಬೇಕು. ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲ ಮಾಡಬಾರದು. ಈಗಿನ ಸರ್ಕಾರ ಬಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುತ್ತದೆ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲ್ಲ. ಹಾಗಾಗಿ ಬಿಜೆಪಿ ಬೆಂಬಲ ನೀಡಿ ಈಗಿರುವ ಸರ್ಕಾರವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಪೇಜಾವರ ಮಠದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ ಅವರು, ಒಂದು ವೇಳೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೆ ಅನಾವಶ್ಯಕ ಖರ್ಚು. ಅಲ್ಲದೆ, ಬರಗಾಲ ಹಾಗೂ ಕೆಲವೊಂದು ಕಡೆ ಮಳೆಯಿಂದಾಗಿ ಅತೀವೃಷ್ಟಿಯೂ ಉಂಟಾಗಿದೆ. ಈ ಸಮಯದಲ್ಲಿ ಸರ್ಕಾರ ಬೀಳಬಾರದು. ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ಎಲ್ಲ ಪಕ್ಷಗಳು ಸೇರಿ ಸರ್ಕಾರ ರಚಿಸಿದ್ದವು. ಚರ್ಚಿಲ್‌ ಆ ಸರ್ಕಾರದ ಪ್ರಧಾನಿಯಾಗಿದ್ದರು. ಆದರೆ ಕೇಂದ್ರದಲ್ಲಿ ಈ ರೀತಿಯ ವ್ಯವಸ್ಥೆ ಅಗತ್ಯವಿಲ್ಲ. ಅಲ್ಲಿ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರವಿದೆ ಎಂದು ಅಭಿಪ್ರಾಯಪಟ್ಟರು.

ಶಿರೂರು ಮಠದ ಉತ್ತರಾಧಿಕಾರಿ ನೇಮಕದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿರೂರು ಮಠದ ಪ್ರಕರಣಗಳು ಇತ್ಯರ್ಥ ಆಗದೆ, ಶಿಷ್ಯತ್ವ ಸ್ವೀಕರಿಸಲು ಯಾರು ಮುಂದೆ ಬರುತ್ತಿಲ್ಲ. ಪಲಿಮಾರು ಮಠಕ್ಕೆ ಉತ್ತರಾಧಿಕಾರಿ ಸಿಕ್ಕಿದ್ದರೆ, ಪುತ್ತಿಗೆ ಮಠಕ್ಕೂ ಸಿಕ್ಕದರೆ. ಆದರೆ ಶಿರೂರು ಮಠದ ಶಿಷ್ಯರಾಗಲು ಹೆದರುತ್ತಿದ್ದಾರೆ. ಹಾಗಾಗಿ ಮೊದಲು ಮಠದ ಸಮಸ್ಯೆಗಳೆಲ್ಲವೂ ಪರಿಹಾರ ಆಗಬೇಕು. ಆ ನಂತರವೇ ಶಿಷ್ಯ ಸ್ವೀಕಾರದ ಬಗ್ಗೆ ಚಿಂತಿಸುವುದು ಸೂಕ್ತ. ಇದೇ ಕಾರಣಕ್ಕೆ ಶಿರೂರು ಶ್ರೀಗಳ ಬೃಂದಾವನ ನಿರ್ಮಾಣ ಕೂಡ ವಿಳಂಬ ಆಗಿರಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಪ್ರತಿಕ್ರಿಯಿಸಿ (+)