ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಹೆಸರಿನಲ್ಲಿ ರೈತರ ಮೇಲೆ ನಡೆಯುತ್ತಿರುವ ಅನ್ಯಾಯ ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯೋಜನೆಯ ಸಂತ್ರಸ್ತ ರೈತರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರೈತ ಮುಖಂಡರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸದಾಶಿವ ಶೆಟ್ಟಿ ಶಂಕರನಾರಾಯಣ, ಜಿಲ್ಲಾ ರೈತ ಸಂಘ ಕಾವ್ರಾಡಿ ವಲಯಾಧ್ಯಕ್ಷ ಕಾಳಿಂಗ ಶೆಟ್ಟಿ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ರೈತ ನಿಯೋಗ, ಸಮಸ್ಯೆಯನ್ನು ಮನವರಿಕೆ ಮಾಡಿದರು. ಸಮಸ್ಯೆ ಉದ್ಭವಿಸಲು ಇಲಾಖೆಯ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಖಂಡಿಸಿದರು.

ಯೋಜನೆಯಲ್ಲಿ ಎಡಭಾಗದ ಕೆಲವು ಪ್ರದೇಶಗಳು, ಬಲಭಾಗದ ಸಂಪೂರ್ಣ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದು ರೈತ ವಿರೋಧಿ ಧೋರಣೆಯಾಗಿದೆ. 4 ಸಾವಿರ ಹೆಕ್ಟರ್ ವ್ಯಾಪ್ತಿಯ ಯೋಜನೆಯಲ್ಲಿ ಕೇವಲ 1,200 ಹೆಕ್ಟರ್ ಪ್ರದೇಶಕ್ಕೆ ಮಾತ್ರ ನೀರಾವರಿ ಸೌಲಭ್ಯ ಒದಗಿಸಿ ಉಳಿದ ಸಾವಿರಾರು ಎಕ್ರೆ ಭೂಮಿಯನ್ನು ಬರಗಾಲಕ್ಕೆ ತಳ್ಳಿರುವುದು ಜನವಿರೋಧಿ ನಿರ್ಧಾರವಾಗಿದೆ ಎಂದು ನಿಯೋಗ ಆರೋಪಿಸಿತು.

ಎಡಭಾಗದ ಕೊಳ್ಳಾಳ, ಬಾನಾಳಿ, ಕದ್ರಿ ಹಕ್ಕು, ಆರಾರಿ, ಸೇಳೋಡು, ಬಲಭಾಗದ ಕೆಳ ಬಾಂಡ್ಯ, ಹೆಮ್ಮಕ್ಕಿ ರೈಸ್ ಮಿಲ್, ಬಾಂಡ್ಯ, ತಗ್ಗುಂಜೆ, ಕರಮನೆ, ಆದ್ರೆ ಚೋನಮನೆ, ಬೆಳ್ಳುವಾಣ, ಎಳಬೇರು, ಹೊಸಂಗಡಿ, ಎಡಮೊಗೆ, ಕರ್ಕುಂಜೆ, ಅಂಪಾರು ಭಾಗದ ಶಾನ್ಕಟ್ಟು, ಗುಬ್ಯಾಡಿ ಕೆರೆ ಪ್ರದೇಶಗಳನ್ನು ಕೈಬಿಡಲಾಗಿದೆ.
ನೀರಾವರಿ ಪೈಪ್ಲೈನ್ ಹಾದು ಹೋಗುವ ಪಕ್ಕದಲ್ಲೇ ಇದ್ದರೂ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂದು ಆರೋಪಿಸಿದರು.

ಬೇಡಿಕೆಗಳು: ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಪುನರ್ ಪರಿಶೀಲಿಸಬೇಕು. ಡಿಪಿಆರ್ನಲ್ಲಿ ಕೈಬಿಟ್ಟಿರುವ ಪ್ರದೇಶಗಳಿಗೆ ನ್ಯಾಯಸಮ್ಮತ ಪಾಯಿಂಟ್ಗಳನ್ನು ನಿಗದಿಪಡಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಪೈಪ್ಲೈನ್ ಕಾಮಗಾರಿ ಸ್ಥಗಿತಗೊಳಿಸಬೇಕು. ಕಾಮಗಾರಿಗೆ ಸಂಬಂಧಿಸಿದ ಪಾವತಿ ಮಾಡಬಾರದು. ರೈತರ ಮೇಲೆ ನಡೆದಿರುವ ಅನ್ಯಾಯಕ್ಕೆ ಸ್ಪಷ್ಟ ಉತ್ತರ, ಹೊಣೆಗಾರಿಕೆ ನಿಗದಿ ಮಾಡಬೇಕು. ಇಲ್ಲದಿದ್ದರೆ ಇಲಾಖೆ, ಜನಪ್ರತಿನಿಧಿಗಳ ಕಾರ್ಯ ವೈಖರಿ ವಿರುದ್ಧ ಹೋರಾಟ ಸಂಘಟಿಸಲಾಗುವುದು ಎಂದು ರೈತ ಮುಖಂಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.