ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮವಾಗಿ ನಡೆದ ಕಾಮೆಡ್‌–ಕೆ ಪರೀಕ್ಷೆ

Last Updated 13 ಮೇ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಕ್ಕೆ ಭಾನುವಾರ ಕಾಮೆಡ್‌–ಕೆ ಪ್ರವೇಶ ಪರೀಕ್ಷೆ ನಡೆಯಿತು. ದೇಶದಾದ್ಯಂತ ಶೇ 81.53ರಷ್ಟು ವಿದ್ಯಾರ್ಥಿಗಳು ಹಾಜರಾದರು.

ಪರೀಕ್ಷೆಗೆ ಒಟ್ಟಾರೆ 76,414 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 62,306 ವಿದ್ಯಾರ್ಥಿಗಳು ಹಾಜರಾದರು. ಕರ್ನಾಟಕದಲ್ಲಿ 25,405 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 21,889 (ಶೇ 86.16) ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ರಾಜ್ಯದ 24 ನಗರಗಳ 108 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಅದರಲ್ಲಿ 48 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಒಟ್ಟಾರೆ ದೇಶದಾದ್ಯಂತ 291 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

‘ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಬಹಳ ಸುಲಭವಾಗಿತ್ತು. ಸಂಖ್ಯೆಗಳ ಕುರಿತಾದ ಪ್ರಶ್ನೆಗಳು ಕಡಿಮೆ ಇದ್ದವು. ಇನ್ನು ಭೌತವಿಜ್ಞಾನದಲ್ಲಿ ಪರಿಕಲ್ಪನೆ ಆಧಾರಿತ ಪ್ರಶ್ನೆಗಳೇ ಹೆಚ್ಚಿದ್ದರಿಂದ ಖುಷಿಯಾಯಿತು. ಗಣಿತ ಪ್ರಶ್ನೆಪತ್ರಿಕೆ ಸಾಧಾರಣವಾಗಿತ್ತು. ಸಂಭವನೀಯ ಪ್ರಶ್ನೆಗಳೇ ಹೆಚ್ಚಿದ್ದವು’ ಎಂದು ಜಿ.ಆರ್‌. ಶರಧಿ, ಪರೀಕ್ಷೆಯ ಅನುಭವ ಹಂಚಿಕೊಂಡರು.

ಐದು ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ: ‘ಬೆಂಗಳೂರಿನ ಐದು ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದ ಪರೀಕ್ಷೆ  ವಿಳಂಬವಾಗಿ ಆರಂಭವಾಯಿತು. ಆದರೆ, ಯಾವ ಸಮಯಕ್ಕೆ ಆನ್‌ಲೈನ್‌ ಪರೀಕ್ಷೆ ಆರಂಭ ಆಗುತ್ತದೋ ಅಲ್ಲಿಂದ ಮೂರು ತಾಸು ಸಮಯ ಸ್ವಯಂ ಚಾಲಿತವಾಗಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಕಾಮೆಡ್‌–ಕೆ ಕಾರ್ಯದರ್ಶಿ ಡಾ.ಎಸ್. ಕುಮಾರ್ ತಿಳಿಸಿದರು.

ಇದೇ 28ಕ್ಕೆ ಫಲಿತಾಂಶ: ತಾತ್ಕಾಲಿಕ ಸರಿ ಉತ್ತರಗಳನ್ನು ಇದೇ 17ರಂದು ಕಾಮೆಡ್‌–ಕೆ (www.comedk.org) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿದ್ದರೆ ಪರಿಶೀಲಿಸಿ ಅಂತಿಮ ಸರಿ ಉತ್ತರಗಳನ್ನು 25ರಂದು ಪ್ರಕಟಿಸಲಾಗುತ್ತದೆ. 28ರಂದು ಫಲಿತಾಂಶ ಪ್ರಕಟಿಸುವುದಾಗಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT