ಪಡುಬಿದ್ರಿ: ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಹಕರು, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಅನ್ನು ತಕ್ಷಣವೇ ವಿತರಿಸುವಂತೆ ಒತ್ತಾಯಿಸಿ ಗ್ಯಾಸ್ ಏಜೆನ್ಸಿ ಮುಂದೆ ಜಮಾಯಿಸಿದ ಘಟನೆ ಸೋಮವಾರ ಪಡುಬಿದ್ರಿಯಲ್ಲಿ ನಡೆದಿದೆ.

ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಕಚೇರಿ ಮುಂದೆ ಜಮಾಯಿಸಿದ ಗ್ರಾಹಕರು ತಮಗೆ ಗ್ಯಾಸ್ ಸಿಲಿಂಡರ್ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಅಲ್ಲಿನ ಸಿಬ್ಬಂದಿ ಮೊಬೈಲ್ ಫೋನ್ ಮೂಲಕ ಬುಕ್ಕಿಂಗ್ ಮಾಡಿದರೆ ಮಾತ್ರ ಸಿಲಿಂಡರ್ ನೀಡಲು ಸಾಧ್ಯವೆಂದು ತಿಳಿಸಿದ್ದಾರೆ. ಆದರೆ, ಕೆಲ ಗ್ರಾಹಕರು, ‘ನಮಗೆ ಮೊಬೈಲ್ ಫೋನ್ ಮೂಲಕ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಗ್ಯಾಸ್ ಖಾಲಿಯಾಗಿರುವುದರಿಂದ ಸಿಲಿಂಡರ್ ನೀಡಲೇಬೇಕು’ ಎಂದು ಪಟ್ಟು ಹಿಡಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು. ಯಾವುದೇ ತೊಂದರೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಗ್ರಾಹಕರಿಗೆ ತಿಳಿಸಿದರು.

ಗ್ಯಾಸ್ ಏಜೆನ್ಸಿಯ ಮಾಲಕಿ ಮಾಲತಿ ಮೋಹನ್ ಮಾತನಾಡಿ, ಎಲ್ಲಾ ಗ್ರಾಹಕರಿಗೂ ನಿಯಮಾನುಸಾರವೇ ಸಿಲಿಂಡರ್ ವಿತರಣೆ ನಡೆಯುತ್ತಿದೆ. ಸಿಲಿಂಡರ್ ಪಡೆಯಲು ಗ್ರಾಹಕರು ಮೊದಲು ಬುಕ್ಕಿಂಗ್ ಮಾಡಿರಬೇಕು ಹಾಗೂ ಅವರಿಗೆ ಬಂದಿರುವ ಒಟಿಪಿ ಮಾಹಿತಿಯನ್ನು ಹೊಂದಿರಬೇಕು. ಬುಕ್ಕಿಂಗ್ ಆಧಾರದ ಮೇಲೆ ಕ್ರಮಸಂಖ್ಯೆ ಅನುಸಾರವಾಗಿ ಗೃಹಬಳಕೆಯ ಸಿಲಿಂಡರ್ ವಿತರಿಸಲಾಗುತ್ತದೆ. ಗೃಹ ಬಳಕೆಯ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ಗೊಂದಲ ಬೇಡ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ನಿಯಮ ಮೀರಿ ಸಿಲಿಂಡರ್ ವಿತರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಪದೇಪದೇ ಪರಿಶೀಲನೆ ನಡೆಸುತ್ತಿದ್ದಾರೆ. ವಾಣಿಜ್ಯೇತರ ಗ್ರಾಹಕರ ಬೇಡಿಕೆ ಹೆಚ್ಚಿದ್ದು, ಹಿಂದೆ ದಿನಕ್ಕೆ ಸುಮಾರು 60ರಷ್ಟು ಬುಕ್ಕಿಂಗ್ ಆಗುತ್ತಿದ್ದ ಸಿಲಿಂಡರ್ ಬೇಡಿಕೆ ಈಗ ಏರಿಕೆಯಾಗಿದೆ. ಆದ್ಯತೆಯ ಮೇರೆಗೆ ಆಸ್ಪತ್ರೆ, ಅಂಗನವಾಡಿ ಹಾಗೂ ಶಾಲೆಗಳಿಗೆ ಸಿಲಿಂಡರ್ ವಿತರಿಸಿದ ಬಳಿಕವೇ ಗೃಹಬಳಕೆಯ ಸಿಲಿಂಡರ್ ವಿತರಣೆ ನಡೆಯುತ್ತದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.