ಉಡುಪಿ: ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸಂಕಷ್ಟದ ಜೀವನ ಸಾಗಿಸುವ ಮಲೆಕುಡಿಯ ಸಮುದಾಯದ ಅಭಿವೃದ್ಧಿಗೆ ಸರ್ಕಾರವು ₹100 ಕೋಟಿಯ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತಾಡಿದ ಅವರು, ನಾವು ವ್ಯವಸ್ಥೆಯ ವಿರುದ್ಧ ಹೋದವರಲ್ಲ. ಮಲೆಕುಡಿಯರು ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಗೌರವ ಇರಿಸಿಕೊಂಡವರು. ನಮಗೆ ಮೂಲಕ ಸೌಕರ್ಯ ಒದಗಿಸುವ ಕುರಿತು ಯಾರೂ ಗಮನ ಹರಿಸಿಲ್ಲ ಎಂದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಿಸುವ ವೇಳೆ ಸರ್ಕಾರವು ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸಿರಲಿಲ್ಲ. ಬಳಿಕ ಕರ್ನಾಟಕ ವಿಮೊಚನಾ ರಂಗವು ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿತು. ಇದರಿಂದ ಒಂದಷ್ಟು ಮಲೆಕುಡಿಯರು ನಕ್ಸಲ್ ಸಂಘಟನೆಗೆ ಸೇರಿದರು. ಜನರ ಆತಂಕವನ್ನು ಸರ್ಕಾರವು ನಿವಾರಿಸಿದ್ದರೆ, ಒಂದಷ್ಟು ಜನ ದಾರಿ ತಪ್ಪುವುದನ್ನು ತಡೆಯಬಹುದಿತ್ತು ಎಂದರು.

ಮಲೆಕುಡಿಯರು ವಾಸಿಸುವ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯವರು ತಡೆಯೊಡ್ಡಿದ್ದಾರೆ. ಅನೇಕರಿಗೆ ಕಿರುಕುಳ ಕೂಡ ನೀಡಿದ್ದಾರೆ. ನಕ್ಸಲ್ ಸಮಸ್ಯೆಯನ್ನು ಪಶ್ಚಿಮ ಘಟ್ಟ ಪ್ರದೇಶದಿಂದ ಸರ್ಕಾರವು ಪೂರ್ಣವಾಗಿ ನಿವಾರಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಸಮುದಾಯದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ನೌಕರಿ ಸಿಕ್ಕಿಲ್ಲ. ಈ ಕಾರಣಕ್ಕೆ ಪರಿಶಿಷ್ಟ ಪಂಗಡ ಒಳಮೀಸಲಾತಿ ಜಾರಿಗೊಳಿಸಬೇಕು. ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಅರಣ್ಯ ಇಲಾಖೆಯಲ್ಲಿರುವ ಸ್ಥಳೀಯ ಬುಡಕಟ್ಟು ಮೀಸಲಾತಿಯನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಿಸಬೇಕು. ನಮ್ಮ ಸಮುದಾಯದ ಜನರಿಗೆ ಪೊಲೀಸರು ಕಿರುಕುಳ ನೀಡಬಾರದು ಮತ್ತು ಅವರ ಮಾನಸಿಕ ನೆಮ್ಮದಿ ಕೆಡಿಸಬಾರದು. ಸರ್ಕಾರವು ಈ ಭಾಗದ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಬೇಕು ಎಂದರು.

ಅರಣ್ಯ ಪ್ರದೇಶದಿಂದ ಸ್ವ ಇಚ್ಛೆಯಿಂದ ಹೊರಬರುವವರಿಗಾಗಿ ಸರ್ಕಾರವು 400 ಎಕರೆ ಜಾಗ ಮೀಸಲಿಡಬೇಕು. ಆ ಕುಟುಂಬಗಳಿಗೆ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಡ್ ಒದಗಿಸಬೇಕು ಎಂದೂ ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಧಾಕರ ಗೌಡ ನಾಡ್ಪಾಲು, ಶೋಭಾ, ಅಶೋಕ ಕೆರ್ವಾಶೆ, ದಿನೇಶ್ ಗೌಡ ಇದ್ದರು.

‘ಜನರ ಆತಂಕ ನಿವಾರಿಸಿ’

ಪಶ್ಚಿಮಘಟ್ಟದ ತಪ್ಪಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನ ಸೋಮೇಶ್ವರ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ವಾಸಿಸುವ ಮಲೆಕುಡಿಯರು ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ ತೋಟಗಾರಿಕೆ ಮೂಲಕವೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಸ್ತೂರಿರಂಗನ್ ವರದಿ ಪರಿಸರ ಸೂಕ್ಷ್ಮ ವಲಯ ವಿಚಾರವಾಗಿ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ವಿಷಯಗಳ ಕುರಿತು ಜನರಿಗಿರುವ ಆತಂಕ ನಿವಾರಿಸಬೇಕು ಮತ್ತು ಮಲೆಕುಡಿಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಂದು ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಗಂಗಾಧರ ಗೌಡ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.