ಬ್ರಹ್ಮಾವರ: ಶಬರಿ ಫಿಲಂಸ್ ವತಿಯಿಂದ ‘ಮಂದಾರ ವಿರಾಸತ್’ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಡೆಯಿತು.

‘ವಿಲಕ್ಷ’ ಚಿತ್ರದ ಫಸ್ಟ್ಲುಕ್ ಅನಾವರಣಗೊಳಿಸಲಾಯಿತು. ಭಜನಾ ತರಬೇತುದಾರ ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ನಿವಾಸಿ ಶ್ರೀಶ್ ಆರ್. ಬಂಗೇರ ಅವರಿಗೆ ‘ಮಂದಾರ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ನಿವೃತ್ತ ಪ್ರಾಧ್ಯಾಪಕ ಸಕರಾಮ ಸ್ವಾಮೀಜಿ, ಚಿತ್ರನಟ ರಘು ಪಾಂಡೇಶ್ವರ, ನಿರ್ದೇಶಕ ಸಂಜಯ್ ಕಾಡೂರು, ನಂದೀಶ್ ಬಿಲ್ಲಾಡಿ, ಐರೇಬೈಲ್ ಆನಂದ ಶೆಟ್ಟಿ, ಖುಷಿ ಮೆಂಡನ್, ಯಕ್ಷಗಾನ ಕಲಾವಿದ ನರಾಡಿ ಭೋಜ ಶೆಟ್ಟಿ, ಕರಾಟೆ ತರಬೇತುದಾರ ಅಶೋಕ್ ಕುಳಲ, ಪ್ರದೀಪ್ ಶೆಟ್ಟಿ ಭಾಗವಹಿಸಿದ್ದರು.

ಅಂತರರಾಷ್ಟ್ರೀಯ ಗಾಳಿಪಟ ಉತ್ಸವ, ಕಲಾ ಚಿಗುರು ನೈಲಾಡಿ ತಂಡದಿಂದ ‘ಹೆಂಗಸ್ರ ಪಂಚಾಯ್ತಿ’ ಹಾಸ್ಯ ಕಾರ್ಯಕ್ರಮ ನಡೆಯಿತು. ನಂದಗೋಕುಲ ಕಲಾವಿದರಿಂದ ‘ಕೊಲ್ಲೂರು ಶ್ರೀಮೂಕಾಂಬಿಕಾ’ ನೃತ್ಯ ರೂಪಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.