ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಗಾಂವ್ ಮಂಗಳೂರು ರೈಲು ಪುನಾರಂಭ

Last Updated 5 ಜನವರಿ 2023, 8:49 IST
ಅಕ್ಷರ ಗಾತ್ರ

ಉಡುಪಿ: ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ 10107 / 10108 ಮಡಗಾಂವ್ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ ರೈಲು ಸಂಚಾರ ಮತ್ತೆ ಪುನಾರಂಭವಾಗುತ್ತಿದೆ. ವಾರದಲ್ಲಿ 6 ದಿನ ರೈಲು ಸಂಚರಿಸಲಿದೆ.

10107 ರೈಲು ಜ.5ರಿಂದ ಬೆಳಗಿನ ಜಾವ 5.15ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಟು ಅದೇ ದಿನ ಮಧ್ಯಾಹ್ನ 12.15ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣ ತಲುಪಲಿದೆ. ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ರೈಲು ಪ್ರಯಾಣಿಸಲಿದೆ.

10108 ರೈಲು ಜ.5ರಂದು ಮಧ್ಯಾಹ್ನ 2.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟು ಅದೇದಿನ ರಾತ್ರಿ 10ಕ್ಕೆ ಮಡಗಾಂವ್ ನಿಲ್ದಾಣ ಮುಟ್ಟಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT