ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ರಂದು ಮಣಿಪಾಲ ಮ್ಯಾರಥಾನ್‌

7 ಸಾವಿರ ಮಂದಿ ನೋಂದಣಿ, ಶ್ರೀಲಂಕಾ, ಕೀನ್ಯಾ ಅಥ್ಲೀಟ್‌ಗಳು ಭಾಗಿ
Last Updated 15 ಫೆಬ್ರುವರಿ 2019, 17:01 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲ ವಿಶ್ವವಿದ್ಯಾಲಯ, ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ ಆಶ್ರಯದಲ್ಲಿ ಫೆ.17ರಂದು ಮಾಹೆ ವಿವಿ ಆವರಣದಲ್ಲಿ 13ನೇ ಮಣಿಪಾಲ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮ್ಯಾರಥಾನ್‌ನಲ್ಲಿ ಭಾಗವಹಿಸಲು 7 ಸಾವಿರ ಮಂದಿ ನೋಂದಣಿ ಮಾಡಿಸಿದ್ದಾರೆ. 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಶ್ರೀಲಂಕಾದ 6 ಅಥ್ಲೀಟ್‌ಗಳು, ಕೀನ್ಯಾದ 8 ಕ್ರೀಡಾಪಟುಗಳು ನೋಂದಣಿ ಮಾಡಿಸಿದ್ದಾರೆ. ಜತೆಗೆ, ಆಳ್ವಾಸ್‌, ಎಂಇಜಿ ರೈಲ್ವೆ ತಂಡಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಲಿವೆ ಎಂದರು.

ವಿಜೇತರಿಗೆ ಮೊದಲ ಬಹುಮಾನವಾಗಿ ₹ 50000, ದ್ವಿತೀಯ ಬಹುಮಾನ₹ 30000, ಹಾಗೂ ತೃತೀಯ ಬಹುಮಾನವಾಗಿ ₹ 15000 ನೀಡಲಾಗುವುದು. ಹಲವು ವಿಭಾಗಗಳಲ್ಲಿ ಪ್ರತ್ಯೇಕ ಬಹುಮಾನಗಳಿದ್ದು, ಒಟ್ಟು ₹ 8,00,000 ನಗದು ಬಹುಮಾನ ಇರಲಿದೆ ಎಂದು ತಿಳಿಸಿದರು.

ಮಾಹೆ ಸಹ ಕುಲಪತಿ ಡಾ.ಎಚ್‌.ಎಸ್‌.ಬಲ್ಲಾಳ್‌, ಐಸಿಸಿಐ ಬ್ಯಾಂಕ್‌ನ ದಕ್ಷಿಣ ವಲಯದ ರೀಟೇಲ್‌ ಬಿಸಿನೆಸ್ ಹೆಡ್‌ ವಿರಾಲ್‌ ರೂಪನ್‌, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಅರಣ್ಯಾಧಿಕಾರಿ ಪ್ರಭಾಕರನ್‌, ನೌಕಾಪಡೆಯ ಯೋಧ ಹಾಗೂ ಸಾಹಸಿ ಅಭಿಲಾಷ್ ಟಾಮಿ, ಅದಾನಿ ಯುಪಿಸಿಎಸ್‌ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಬಾಲಕೃಷ್ಣ ಹೆಗ್ಡೆ, ಎಸ್‌ಐಐ ಇಂಡಿಯಾ ಸಂಸ್ಥೆಯ ಸುಕುಮಾರ್‌, ಮಾಹೆ ಉಪ ಕುಲಪತಿ ಡಾ.ವಿನೋದ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ವಿನೋದ್ ನಾಯಕರ್, ದಿನೇಶ್‌ ಡಿ.ಕೋಟ್ಯಾನ್‌, ಡಾ.ದೀಪಕ್ ರಾಮ್ ಬಾಯರಿ, ಡಾ.ಶೋಭಾ, ಬಾಲಕೃಷ್ಣ ಹೆಗ್ಡೆ, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT