ಉಡುಪಿ: ಅಂಬಾಗಿಲು– ಮಣಿಪಾಲ ಮುಖ್ಯರಸ್ತೆಯ ಪೆರಂಪಳ್ಳಿ ಸಾಯಿರಾಧ ಗ್ರೀನ್ ವ್ಯಾಲಿ ಬಳಿ ₹ 59 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟಿದ್ದ ರಸ್ತೆಯಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದ ಕಾರಣ ಉಡುಪಿ ಕ್ಷೇತ್ರಕ್ಕೆ ಮಂಜೂರಾದ ಲೋಕೋಪಯೋಗಿ ಇಲಾಖೆ ಅನುದಾನವನ್ನು ಈ ರಸ್ತೆಗೆ ಮೀಸಲಿರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಪೆರಂಪಳ್ಳಿ ಫಾತಿಮಾ ಚರ್ಚ್ ಧರ್ಮ ಗುರು ವಿಶಾಲ್ ಲೋಬೊ ಮಾತನಾಡಿದರು. ಮೂಡು ಪೆರಂಪಳ್ಳಿ ವಾರ್ಡಿನ ನಗರಸಭಾ ಮಾಜಿ ಸದಸ್ಯೆ ಅನಿಟಾ ಬೆಲಿಂಡ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸುಮಿತ್ರಾ ನಾಯಕ್, ಕಿರಣ್ ಕುಮಾರ್ ಬೈಲೂರು, ಭಾರತಿ ಪ್ರಶಾಂತ, ಗಿರಿಧರ ಆಚಾರ್ಯ, ಮಂಜುನಾಥ ಮಣಿಪಾಲ, ಟಿ. ಜಿ. ಹೆಗ್ಡೆ, ದಿನೇಶ್ ಅಮೀನ್, ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು. ಶಂಕರ್ ಕುಲಾಲ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.