ಕುಂದಾಪುರ: ಮಾರ್ಚ್ 19ರಂದು ಮಾರಣಕಟ್ಟೆಯಲ್ಲಿ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ನೇತೃತ್ವದಲ್ಲಿ ಎಂ.ಎಸ್. ನಾರಾಯಣ ಮಂಜರು ಮತ್ತು ಕುಟುಂಬಿಕರು ನಡೆಸಲಿರುವ ಚತುಷಃ ಪವಿತ್ರ ನಾಗಮಂಡಲೋತ್ಸವಕ್ಕೆ ಪರಿಸರದ 15 ಗ್ರಾಮಗಳಿಂದ ಭಾನುವಾರ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕೃಷ್ಣಮೂರ್ತಿ ಮಂಜರು ಮಾತನಾಡಿ, ನಾಗಮಂಡಲದ ಮಹೋತ್ಸವದಲ್ಲಿ ಊರ, ಪರವೂರ ಭಕ್ತರು ಪಾಲ್ಗೊಳ್ಳುತ್ತಿರುವುದು ಋಷಿ ತಂದಿದೆ. ಸತ್ಕಾರ್ಯದ ಪುಣ್ಯದ ಫಲ ಎಲ್ಲರಿಗೂ ದೊರಕಬೇಕು ಎನ್ನುವ ನಮ್ಮ ಕುಟುಂಬದ ಆಶಯಕ್ಕೆ ಪೂರಕವಾಗಿ ಎಲ್ಲರ ಸಹಕಾರದಿಂದ ಧರ್ಮ ಕಾರ್ಯ ನಡೆಯುತ್ತಿದೆ ಎಂದರು.

ಅರ್ಚಕ ಮಾರಣಕಟ್ಟೆ ರಾಮಚಂದ್ರ ಮಂಜರು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ, ವಿಘ್ನೇಶ ಮಂಜರು, ಶ್ರೀಧರ ಮಂಜರು, ನಾಗರಾಜ್ ಮಂಜರು, ಪ್ರಭಾಕರ ಆಚಾರ್ಯ ಚಿತ್ತೂರು, ಉದಯ್ ಕುಮಾರ್ ಶೆಟ್ಟಿ ಅಡ್ಕೆಕೊಡ್ಲು, ಗಣೇಶ್ ಉಡುಪ, ಅನಿಲ್ ಕುಮಾರ್ ಶೆಟ್ಟಿ ಚಿತ್ತೂರು, ಸಂತೋಷ್ ಕುಮಾರ್ ಶೆಟ್ಟಿ ಚಿತ್ತೂರು, ಸಂಜೀವ ಶೆಟ್ಟಿ ಮಕ್ಕಿಮನೆ, ರವೀಂದ್ರ ಶೆಟ್ಟಿ ಚಿತ್ತೂರು, ದಿವಾಕರ್ ಆಚಾರ್ಯ ಚಿತ್ತೂರು ಭಾಗವಹಿಸಿದ್ದರು.

ಕೆರಾಡಿ, ಬೆಳ್ಳಾಲ, ಚಿತ್ತೂರು, ವಂಡ್ಸೆ, ನೂಜಾಡಿ, ಹಕ್ಲಾಡಿ, ಕಾಡಿನಕೊಂಡ, ಜಡ್ಕಲ್, ಮೋರ್ಟ್, ಇಡೂರು ಕುಂಜ್ಞಾಡಿ ಸೇರಿದಂತೆ ಪರಿಸರದ ಹಲವು ಗ್ರಾಮಗಳಿಂದ ಮೆರವಣಿಗೆಯಲ್ಲಿ ತರಲಾದ ಹೊರೆಕಾಣಿಕೆಯನ್ನು ಸಾಂಪ್ರದಾಯಿಕವಾಗಿ ಸ್ವೀಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.