ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೈವ ಚಾಕರಿಯವರಿಗೆ ಮಾಸಾಶನ’: ಸಚಿವ ಸುನಿಲ್ ಕುಮಾರ್

ಚಾರ ಗರಡಿಯ ಕೆಸರ‍್ಡ್‌ ಒಂಜಿ ದಿನ ಕಾರ್ಯಕ್ರಮದಲ್ಲಿ ಸುನಿಲ್‌ ಕುಮಾರ್‌
Last Updated 8 ಆಗಸ್ಟ್ 2022, 4:21 IST
ಅಕ್ಷರ ಗಾತ್ರ

ಹೆಬ್ರಿ: ದೈವಾರಾಧನೆಯನ್ನು ಕಲೆಯ ವ್ಯಾಪ್ತಿಗೊಳಪಡಿಸಿ 60 ವರ್ಷ ತುಂಬಿದ ದೈವಾರಾಧಕರಿಗೆ ಮಾಸಿಕ ₹2 ಸಾವಿರ ಮಾಸಾಶನ ನೀಡುವ ಮಹತ್ವದ ನಿರ್ಧಾರವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಸರ್ಕಾರ ಮಾಡಿದೆ. ಅರ್ಹರು ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.

ಹೆಬ್ರಿ ತಾಲ್ಲೂಕು ತುಳುನಾಡ ದೈವ
ರಾಧಕರ ಒಕ್ಕೂಟದ ವತಿಯಿಂದ ನಡೆದ 3ನೇ ವರ್ಷದ ವಾರ್ಷಿಕೋತ್ಸವದ ಕೆಸರ‍್ಡ್‌ ಒಂಜಿ ದಿನ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಸರುಗದ್ದೆ ಕಾರ್ಯಕ್ರಮಗಳು ಅಲ್ಲಲ್ಲಿ ವಿಶೇಷವಾಗಿ ನಡೆಯುತ್ತಿದ್ದು ಮನಸ್ಸುಗಳನ್ನು ಬೆಸೆಯುವ ಕಾರ್ಯ ನಡೆಯಲಿ. ತುಳುನಾಡ ದೈವರಾಧಕರ ಒಕ್ಕೂಟವು ಇನ್ನಷ್ಟು ಗಟ್ಟಿಯಾಗಿ ಎಲ್ಲರಿಗೂ ಮಾದರಿಯಾಗಲಿ. ಅಭಿವೃದ್ಧಿಯ ಜೊತೆಗೆ ಕೃಷಿಯನ್ನು ಮರೆಯದೆ ಸಮೃದ್ಧವಾಗಿ ಮಾಡಿ ಕೃಷಿ ವೈಭವ ಪುನಃ ಮರುಕಳಿಸಲಿ’ ಎಂದು ಶುಭ ಕೋರಿದರು.

ಹೆಬ್ರಿ ತಾಲ್ಲೂಕು ದೈವಾರಾಧಕರ ಒಕ್ಕೂಟದ ಅಧ್ಯಕ್ಷ ಮುದ್ರಾಡಿ ಸುಕುಮಾರ ಬಿ. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳು ನಡೆದವು. ಹಿರಿಯ ದೈವಚಾಕರಿ
ಯವರನ್ನು ಸನ್ಮಾನಿಸಲಾಯಿತು.

ಚಾರ ಗ್ರಾಮ‌ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಪ್ರಭು, ಸದಸ್ಯ ಸಂತೋಷ ಶೆಟ್ಟಿ, ಉದ್ಯಮಿ ಗೋಳಿಯಂಗಡಿ ಕರುಣಾಕರ ಶೆಟ್ಟಿ, ಚಾರ ವಾದಿರಾಜ. ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಮೇಲ್ಬೆಟ್ಟು ಗರಡಿಯ ಅಧ್ಯಕ್ಷ ಸುರೇಶ್ ಹೆಗ್ಡೆ, ಕೆರ್ಜಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಯತಿರಾಜ್ ಶೆಟ್ಟಿ, ಹೆಬ್ರಿ ಸಬ್ ಇನ್‌ಸ್ಪೆಕ್ಟರ್‌ ಸುದರ್ಶನ್ ದೊಡ್ಡಮನಿ, ಬಿಜೆಪಿ ನಾಯಕ ಉದಯ ಎಸ್., ಒಕ್ಕೂಟದ ಗೌರವಾಧ್ಯಕ್ಷ ಭೋಜ ಪೂಜಾರಿ, ಪದಾಧಿಕಾರಿಗಳು ಇದ್ದರು.

ಸಚಿನ್ ಪೆರ್ಡೂರು ನಿರೂಪಿಸಿ ಸಂತೋಷ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT