ಸೋಮವಾರ, ಮಾರ್ಚ್ 27, 2023
32 °C

ಉಕ್ರೇನ್‌ನ ಕೀವ್‌ನಲ್ಲಿ ಸಿಲುಕಿದ ಬ್ರಹ್ಮಾವರದ ವಿದ್ಯಾರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಅವರ ಪುತ್ರ ರೋಹನ್ ಉಕ್ರೇನ್‌ನ ಕೀವ್‌ನಲ್ಲಿ ಸಿಲುಕಿದ್ದಾರೆ.

ರೋಹನ್‌ ಅಲ್ಲಿನ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗಿನಿಂದಲೂ ಪುತ್ರ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿದ್ದ. ಸದ್ಯ ಕೀವ್‌ನಲ್ಲಿ ಆತಂಕದ ವಾತಾವರಣ ಇದ್ದು, ಯುದ್ಧ ವಿಮಾನಗಳು ಹಾರಾಡುತ್ತಿರುವ ಬಗ್ಗೆ ಪುತ್ರ ಮಾಹಿತಿ ನೀಡಿರುವುದಾಗಿ ತಂದೆ ಧನಂಜಯ್ ತಿಳಿಸಿದರು. 

ರೋಹನ್‌ನನ್ನು ಸದ್ಯ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಾರ್ಚ್‌ 8ಕ್ಕೆ ಉಕ್ರೇನ್‌ನಿಂದ ಭಾರತಕ್ಕೆ ಬರಲು ವಿಮಾನದ ಟಿಕೆಟ್‌ ಬುಕ್ಕಿಂಗ್ ಮಾಡಲಾಗಿದೆ ಎಂದು ಧನಂಜಯ್ ಮಾಹಿತಿ ನೀಡಿದರು.

ಉಕ್ರೇನ್ ದೇಶದಲ್ಲಿ ಉಡುಪಿ ಜಿಲ್ಲೆಯ ನಾಗರಿಕರು ವಾಸವಾಗಿದ್ದರೆ ಅಂಥವರ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗಾಗಿ ಉಕ್ರೇನ್‌ಗೆ ತೆರಳಿದವರ ಮಾಹಿತಿ ಸರ್ಕಾರಕ್ಕೆ ಅಗತ್ಯವಿದ್ದು ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1077ಗೆ ಕರೆ ಮಾಡಿ ನೀಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು