ಮನಸ್ಸು, ದೇಹ ಒಡ್ಡುವ ಸವಾಲು ಎದುರಿಸಿ

7
ವಿಶ್ವ ಮಾನಸಿಕ ಆರೊಗ್ಯ ದಿನಾಚರಣೆಯಲ್ಲಿ ಚಿಂತಕ ಜಿ.ರಾಜಶೇಖರ್‌

ಮನಸ್ಸು, ದೇಹ ಒಡ್ಡುವ ಸವಾಲು ಎದುರಿಸಿ

Published:
Updated:
Deccan Herald

ಉಡುಪಿ: ಮಾನಸಿಕ ಅಸ್ವಸ್ಥತೆಗೆ ಖಿನ್ನತೆಯೇ ಪ್ರಮುಖ ಕಾರಣ. ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್‌ನ ವರದಿಯ ಅನ್ವಯ 14 ವರ್ಷದೊಳಗಿನ ಶೇ 50ರಷ್ಟು ಮಕ್ಕಳು ಖಿನ್ನತೆಗೆ ಬಲಿಯಾಗುತ್ತಿದ್ದಾರೆ ಎಂದು ಡಾ.ಎ.ವಿ.ಬಾಳಿಗಾ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ತಿಳಿಸಿದರು.

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಕರು ಮತ್ತು ಮಾನಸಿಕ ಆರೋಗ್ಯ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆಧುನಿಕ ಜೀವನಶೈಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದ್ದು, ಖಿನ್ನತೆಗೆ ಕಾರಣವಾಗಿದೆ. ಪರಿಣಾಮ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಈಚೆಗೆ ಯುವಕರು ಸಂಘ ಜೀವನದಿಂದ ದೂರವಾಗಿ ಎಲೆಕ್ಟ್ರಾನಿಕ್‌ ಸಾಧನಗಳತ್ತ ವಾಲಿದ್ದಾರೆ. ಒಂಟಿ ಜೀವನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈ ಹವ್ಯಾಸ ಖಿನ್ನತೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

ಆತ್ಮಹತ್ಯೆಗೆ ಖಿನ್ನತೆಯೇ ಮುಖ್ಯವಾದ ಕಾರಣವಾಗಿದ್ದು, ಆತ್ಮಸ್ಥೈರ್ಯದಿಂದ ಆತ್ಮಹತ್ಯೆ ನಿರ್ಧಾರದಿಂದ ಹೊರಬರಬಹುದು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಖಿನ್ನತೆಗೆ ಒಳಗಾದವರಿಗೆ ಆತ್ಮಸ್ಥೈರ್ಯ ತುಂಬುವ ಮತ್ತು ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಇದನ್ನು ಬಳಸಿಕೊಳ್ಳಬೇಕು ಎಂದರು.

ಅತಿಯಾದ ಶ್ರೀಮಂತಿಕೆ, ಬಡತನ, ಮೊಬೈಲ್‌ ಬಳಕೆ, ಸಾಮಾಜಿಕ ಜಾಲತಾಣದ ಬಳಕೆ ಮನುಷ್ಯನನ್ನು ಖಿನ್ನತೆಗೆ ನೂಕುತ್ತದೆ. ಈ ಬಗ್ಗೆ ಎಚ್ಚರವಾಗಿರಬೇಕು. ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದರು.

ಚಿಂತಕ ಜಿ.ರಾಜಶೇಖರ್‌ ಮಾತನಾಡಿ, ‘ಹರೆಯದಲ್ಲಿ ಮನಸ್ಸು ಹಾಗೂ ದೇಹಗಳು ಒಡ್ಡುವ ಸವಾಲನ್ನು ಎದುರಿಸಿದಾಗ ಖಿನ್ನತೆಯಿಂದ ಹೊರಬರಲು ಸಾಧ್ಯ. ಮೂಢನಂಬಿಕೆ ಕೂಡ ಖಿನ್ನತೆಗೆ ಕಾರಣವಾಗಿದ್ದು, ಇದರಿಂದ ಹೊರ ಬರಬೇಕಾಗಿದೆ. ಮಾನಸಿಕ ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ್ದು, ಅದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಾವರ ರೋಟರಿ ಕ್ಲಬ್‌ ಅಧ್ಯಕ್ಷ ಸುಧಾಕರ್‌ ಶೆಟ್ಟಿ, ಶಂಕರಪುರದ ಅಧ್ಯಕ್ಷ ಚಂದ್ರಪೂಜಾರಿ, ಸಮಾಜಸೇವಕ ವಿಶುಶೆಟ್ಟಿ ಹಾಗೂ ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಲಾಯಿತು. ಡಾ.ದೀಪಕ್‌ ಮಲ್ಯ ಅವರು ‘ತೀವ್ರ ತೆರನಾದ ಮಾನಸಿಕ ಕಾಯಿಲೆಗಳು ಮತ್ತು ಗುರುತಿಸುವಿಕೆ’ ಹಾಗೂ ಜೀವನ ಲೂಯಿಸ್‌ ಅವರು ‘ಅಲ್ಪ ತೆರನಾದ ಮಾನಸಿಕ ಕಾಯಿಲೆಗಳ ಕುರಿತು’ ವಿಷೇಶ ಉಪನ್ಯಾಸ ನೀಡಿದರು.

ನಿವೃತ್ತ ಉಪ ಪ್ರಬಂಧಕ ಮೀನಾಕ್ಷಿ ಭಂಡಾರಿ ಉಪಸ್ಥಿತರಿದ್ದರು. ಎಂ.ಎನ್‌ ಗಿರೀಶ್‌ ಸ್ವಾಗತಿಸಿದರು, ಸುಚಿತ್ರಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !