ಭಾನುವಾರ, ಸೆಪ್ಟೆಂಬರ್ 15, 2019
26 °C

ಭಾಗವತಿಕೆಯಲ್ಲಿ ಮೋದಿ, ಕಟೀಲ್‌ ಜಪ

Published:
Updated:
Prajavani

ಉಡುಪಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವತಿಕೆ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಹಾಗೂ ನಳೀನ್ ಕುಮಾರ್ ಕಟೀಲು ಅವರನ್ನು ಹಾಡಿ ಹೊಗಳಿದರು. 

ನಳಿನ್‌ಗೆ ಅಭಿನಂದನೆ ನಡೆಯುತ್ತಿದ್ದ ಸಂದರ್ಭ ಭಾಗವತರಾದ ಗಣೇಶ್‌ ನೇತೃತ್ವದ ತಂಡ ಕಾಶ್ಮೀರ ಸಮಸ್ಯೆ ಪರಿಹಾರ, ವಿಶ್ವಗುರು ಭಾರತ, ದುಷ್ಟರ ನಿಗ್ರಹ ಶಿಷ್ಟರ ಪಾಲಕ, ವೀರ ಶೂರ ಎಂಬ ಪದಪುಂಜಗಳನ್ನು ಬಳಿಸಿದ ಹಾಡನ್ನು ರಚಿಸಿ ಪ್ರಧಾನಿ ಮೋದಿ, ನಳಿನ್, ಅಮಿತ್ ಶಾ, ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿತು.

ಹಾಡಿನಿಂದ ಸಂತಸಗೊಂಡ ನಳಿನ್ ಗಣೇಶ್ ಅವರಿಗೆ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು.

Post Comments (+)