ಭಾನುವಾರ, ಜೂಲೈ 5, 2020
23 °C

ಉಡುಪಿ: ಮಧ್ಯ ಶಿಲಾಯುಗದ ಕುರುಹುಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕುಂದಾಪುರ ತಾಲ್ಲೂಕಿನ ಇಡೂರು–ಕುಂಜಾಡಿಯಲ್ಲಿ ಮಧ್ಯ ಶಿಲಾಯುಗದ ಕುರುಹುಗಳು ಇರುವ ಪ್ರದೇಶ ಪತ್ತೆಯಾಗಿವೆ ಎಂದು ಪುರಾತತ್ವ ತಜ್ಞ ಪ್ರೊ.ಟಿ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಡೂರು–ಕುಂಜಾಡಿ ಪ್ರದೇಶವು ಮೂಕಾಂಬಿಕಾ ಮೀಸಲು ಅಭಯಾರಣ್ಯ ವ್ಯಾಪ್ತಿಗೆ ಸೇರಿದ್ದು, ಮಧ್ಯ ಶಿಲಾಯುಗಕ್ಕೆ ಸೇರಿದ ಅಪರೂಪದ ವಸ್ತುಗಳು ಸಿಕ್ಕಿವೆ. 2019ರಲ್ಲಿ ಕೂಡ ಅವಲಕ್ಕಿ ಪರೆ ಪ್ರದೇಶದಲ್ಲಿ ಕ್ರಿ.ಪೂ 6000 ವರ್ಷಗಳ ಹಿಂದಿನ ಕಲ್ಲಿನ ಕೆತ್ತನೆಯ ಕುರುಹುಗಳನ್ನು ಪತ್ತೆಹಚ್ಚಲಾಗಿತ್ತು. ಈಗ ಇಡೂರು ಕುಂಜಾಡಿಯಲ್ಲಿ ಪತ್ತೆಯಾಗಿರುವ ಕುರುಹುಗಳು ಸಹ ಅವಲಕ್ಕಿ ಪರೆ ಪ್ರದೇಶಕ್ಕೆ ಹತ್ತಿರದಲ್ಲಿರುವುದು ವಿಶೇಷ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.